ನವದೆಹಲಿ: ಫ್ಲಿಪ್‍ಕಾರ್ಟ್, ಅಮೇಜಾನ್‍ನಂತಹ ಇ- ಕಾಮರ್ಸ್ ಕಂಪನಿಗಳ ವಿರುದ್ಧ ಮಧ್ಯಂತರ ಆದೇಶ ನೀಡಲು ನಿರಾಕರಿಸಿರುವ ದೆಹಲಿ ಹೈಕೋರ್ಟ್, ಈ ಕಂಪನಿಗಳು ಎಫ್ ಡಿಐ ನಿಯಮಗಳನ್ನು ಉಲ್ಲಂಘಿಸಿರುವ ಆರೋಪಗಳ ಕುರಿತು ಸರ್ಕಾರ ನಡೆಸುತ್ತಿರುವ ತನಿಖಾ ವರದಿ, ಕೈಗೊಂಡಿರುವ ಕ್ರಮಗಳ ವರದಿಗೆ ಕಾಯುತ್ತಿರುವುದಾಗಿ ಹೇಳಿದೆ.