2025 -2050 ರ ವೇಳೆಗೆ ಭಾರತದ ರಫ್ತು ಚೀನಾವನ್ನು ಹಿಂದಿಕ್ಕಲಿದೆ: ಹೆಚ್ ಎಸ್ ಬಿಸಿ

2025 -2050 ರ ವೇಳೆಗೆ ಭಾರತದ ರಫ್ತು ವಿಭಾಗ ಚೀನಾವನ್ನು ಹಿಂದಿಕ್ಕಲಿದೆ ಎಂದು ಜಾಗತಿಕ ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖ ಸಂಸ್ಥೆ ಹೆಚ್ ಎಸ್ ಬಿಸಿ ಹೇಳಿದೆ.
ಹೆಚ್ ಎಸ್ ಬಿಸಿ
ಹೆಚ್ ಎಸ್ ಬಿಸಿ

ನವದೆಹಲಿ: 2025 -2050 ರ ವೇಳೆಗೆ ಭಾರತದ ರಫ್ತು ವಿಭಾಗ ಚೀನಾವನ್ನು ಹಿಂದಿಕ್ಕಲಿದೆ ಎಂದು ಜಾಗತಿಕ ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖ ಸಂಸ್ಥೆ ಹೆಚ್ ಎಸ್ ಬಿಸಿ ಹೇಳಿದೆ.
ಹೆಚ್ಎಸ್ ಬಿಸಿ ಬಿಡುಗಡೆ ಮಾಡಿರುವ ಟ್ರೇಡ್ ವಿಂಡ್ಸ್ ವರದಿಯಲ್ಲಿ, ಭಾರತ, ಚೀನಾದ ರಫ್ತು ಕುರಿತಾದ ಮುನ್ನೋಟ ನೀಡಿದ್ದು, ಭಾರತದ ವಾಣಿಜ್ಯ ರಫ್ತು 2025 ರಿಂದ 2050 ವರೆಗೆ ಪ್ರತಿ ವರ್ಷ ಶೇ.6 ರಷ್ಟು ಬೆಳವಣಿಯಾಗಲಿದೆ. ಚೀನಾದ ರಫ್ತು ಪ್ರಮಾಣ ಶೇ.5 ರಷ್ಟು ಬೆಳವಣಿಗೆಯಾಗಲಿದೆ ಎಂದು ತಿಳಿಸಿದೆ.
ಜಾಗತಿಕ ಬೇಡಿಕೆ ಸನ್ನಿವೇಶ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳಲ್ಲಿ ಕುಸಿತ ಕಂಡಿರುವುದರಿಂದ ಭಾರತದ ರಫ್ತು ಪ್ರಮಾಣದ ಮೇಲೆ ಪರಿಣಾಮ ಬೀರಿದೆ. ಭಾರತ ಶುದ್ಧೀಕೃತ ಉತ್ಪನ್ನಗಳ ರಫ್ತುಕೇಂದ್ರವಾಗಿದೆ. ಸತತ 11 ನೇ ತಿಂಗಳಲ್ಲೂ ಭಾರತದ ಸರಕುಗಳ ಸಾಗಣೆ ಕುಸಿತ ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com