

ಮುಂಬೈ: ಕಳೆದ ಜುಲೈ ನಂತರದಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ದರಗಳು ಜಾಗತಿಕ ಮಾರುಕಟ್ಟೆ ದರಕ್ಕೆ ಖರೀದಿಸಿದರೆ ಡಿಸ್ಕೌಂಟ್ ನೀಡಿ ಮಾರಾಟ ಮಾಡಲಾಗಿದೆ.
ಮುಂಗಾರು ಸಮರ್ಪಕವಾಗಿ ಆಗದಿರುವುದರಿಂದ ಚಿನ್ನಕ್ಕೆ ಬೇಡಿಕೆ ಇಲ್ಲವಾಗಿದ್ದು ಡಿಸ್ಕೌಂಟ್ ಮಾಡುವ ಪರಿಸ್ಥಿತಿ ಎದುರಾಗಿದೆ. ಒಂದು ಔನ್ಸ್ ಚಿನ್ನ ಖರೀದಿಸಿದರೆ 50 ಸೆಂಟ್ ಗಳಿಂದ 4 ಡಾಲರ್‍ವರೆಗೂ ರಿಯಾಯಿತಿ ನೀಡಲಾಯಿತು.
ಕಳೆದ ವಾರ 70 ಸೆಂಟ್‍ಗಳಿಂದ 1.50 ಡಾಲರ್ ವರೆಗೂ ರಿಯಾಯಿತಿ ನೀಡಲಾಗಿತ್ತು. ಕಳೆದ ಜುಲೈನಲ್ಲಿ 15 ಡಾಲರ್ ವರೆಗೂ ರಿಯಾಯಿತಿ ನೀಡಲಾಗಿತ್ತು. ದೇಶದಲ್ಲಿ ಚಿನ್ನ ಖರೀದಿಸುವವರಲ್ಲಿ ಮೂರನೆ ಎರಡರಷ್ಟು ಗ್ರಾಮೀಣ ಪ್ರದೇಶದವರಾಗಿದ್ದಾರೆ. ಮಳೆ ಕೊರತೆಯಿಂದಾಗಿ ಚಿನ್ನಕ್ಕೆ ಬೇಡಿಕೆ ಇಲ್ಲದಂತಾಗಿದೆ.