

ದುಬೈ: ಭಾರತದ ಚಿನ್ನಾಭರಣ ತಯಾರಿಕಾ ಕಂಪನಿ ಜಿಆರ್ಟಿ ಜ್ಯೂವೆಲರ್ಸ್ 1 ಕೆಜಿ ಚಿನ್ನದ ಮೂರು ಜೊತೆ ಜುಮಕಿಗಳನ್ನು ತಯಾರಿಸಿದೆ.
ದಾಖಲೆ ನಿರ್ಮಿಸುವುದಕ್ಕಾಗಿಯೇ ಈ ಬೃಹತ್ ಗಾತ್ರದ ಆಭರಣ ತಯಾರಿಸಿರುವುದಾಗಿ ಕಂಪನಿ ಹೇಳಿದೆ. 22 ಕ್ಯಾರೆಟ್ ಚಿನ್ನದ ಜುಮುಕಿ ತಯಾರಿಸಿದ್ದು ಇದರ ಮೌಲ್ಯ ರು.36 ಲಕ್ಷಗಳಾಗಿದೆ. ಭಾರತದ ಸಾಂಪ್ರದಾಯಿಕ ವಿನ್ಯಾಸದಲ್ಲೇ ತಯಾರಿಸಲಾಗಿದೆ ಎಂದು ಕಂಪನೆಯ ಎಂಡಿ ಜಿ.ಆರ್.ಆನಂದ್ ಅನಂತಪದ್ಮನಾಭನ್ ಹೇಳಿದ್ದಾರೆ. ಏನಾದರೊಂದು ವಿಶೇಷ ಮಾಡಿ ದುಬೈ ಗ್ರಾಹಕರನ್ನು ಸಳೆಯಲು ಬೃಹತ್ ಗಾತ್ರದ ಜುಮುಕಿ ತಯಾರಿಸಿದ್ದಾಗಿಯೂ ತಿಳಿಸಿದ್ದಾರೆ.
ಇಲ್ಲಿನ ಕಂಪನಿ ಮಳಿಗೆಯಲ್ಲಿ ಬೃಹತ್ ಗಾತ್ರದ ನೋಡಲು ನೂಕುನುಗ್ಗಲು ಏರ್ಪಟ್ಟಿತ್ತು ಎಂದು ಹೇಳಲಾಗುತ್ತಿದೆ. ಈ ಜುಮುಕಿ ಸುಮಾರು 1 ರಿಂದ 1.5ಅಡಿ ಉದ್ದವಿದ್ದು, ಯಾರೂ ಸಹ ಧರಿಸುವುದಿಲ್ಲ. ಆದರೆ ಸಂಗ್ರಹಕ್ಕಾಗಿ ಇಟ್ಟುಕೊಳ್ಳುವವರಿಗೆ ಮಾರಾಟ ಮಾಡಲು ಮುಕ್ತವಾಗಿರುವುದಾಗಿ ಅನಂತ ಪದ್ಮನಾಭನ್ ಹೇಳಿದ್ದಾರೆ. ಸೇರಿಸಲು ಮನವಿ ಸಲ್ಲಿಸುವುದಾಗಿಯೂ ಅವರು ತಿಳಿಸಿದ್ದಾರೆ.