ಎಫ್‌ಡಿಐ ಆಕರ್ಷಣೆ ಭಾರತ ಮುಂದು

ಜಾಗತಿಕ ಮಟ್ಟದಲ್ಲಿ ಬುಧವಾರ ಬಿಡುಗಡೆಯಾಗಿರುವ ಎರಡು ವರದಿಗಳು ವಾಣಿಜ್ಯ ಮತ್ತು ಹಣಕಾಸು ಕ್ಷೇತ್ರದಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಜಾಗತಿಕ ಮಟ್ಟದಲ್ಲಿ ಬುಧವಾರ ಬಿಡುಗಡೆಯಾಗಿರುವ ಎರಡು ವರದಿಗಳು ವಾಣಿಜ್ಯ ಮತ್ತು ಹಣಕಾಸು ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಉತ್ತಮಪಡಿಸಿವೆ.
ವಿದೇಶಿ ನೇರ ಹೂಡಿಕೆ ಆಕರ್ಷಣೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ ಸ್ಪರ್ಧಾತ್ಮಕ ಆರ್ಥಿಕತೆಯಲ್ಲಿ ತನ್ನ ಸ್ಥಾನವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದೆ.

ವಿದೇಶಿ ನೇರ ಹೂಡಿಕೆ ಆಕರ್ಷಣೆ ಸೂಚ್ಯಂಕದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ 55ನೇ ಸ್ಥಾನಗಳಿಸಿದೆ. ಈ ಹಿಂದಿನ ಸ್ಥಾನಕ್ಕೆ ಹೋಲಿಸಿದರೆ 16 ಸ್ಥಾನ ಏರಿಕೆ ಕಂಡಿದೆ. ಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ ಭಾರತ 3,100 ಕೋಟಿ ಡಾಲರ್ ಎಫ್ಡಿಐ ಪಡೆದಿದೆ.

ಇದರೊಂದಿಗೆ ಚೀನಾ ಮತ್ತು ಅಮೆರಿಕವನ್ನು ಹಿಂದಿಟ್ಟಿದೆ. ಭಾರತ ರಕ್ಷಣೆ, ರೈಲ್ವೆ, ನಿರ್ಮಾಣ, ವಿಮೆ ಮತ್ತು ಆರೋಗ್ಯ ಸೇವೆಗಳು ಸೇರಿದಂತೆ ಹಲವು ಕ್ಷೇತ್ರಗಳನ್ನು ವಿದೇಶಿ ನೇರ ಹೂಡಿಕೆಗೆ ಮುಕ್ತಗೊಳಿಸಿದೆ. ಇದರ ಫಲವಾಗಿ ಜಾಗತಿಕ ಹೂಡಿಕೆದಾರರು ಭಾರತದತ್ತ ಮುಖ ಮಾಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಎಫ್ಡಿಐ ಪ್ರಮಾಣ ಶೇ.16ರಷ್ಟು ಇಳಿಮುಖ ಕಂಡಿರುವ ನಡುವೆ ಭಾರತ ಹೆಚ್ಚು ಬಂಡವಾಳ ಆಕರ್ಷಿಸಿದೆ.

ಸರ್ಕಾರ ಹಲವು ಕ್ಷೇತ್ರಗಳನ್ನು ಮುಕ್ತಗೊಳಿಸಿದ್ದರಿಂದ ಇದು ಸಾಧ್ಯವಾಗಿದೆ ಎಂದು ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ (ಡಿಐಪಿಪಿ) ಕಾರ್ಯದರ್ಶಿ ಅಮಿತಾಭ್ ಕಾಂತ್ ಹೇಳಿದ್ದಾರೆ. ಈ ವರದಿಗಳು ಸಂತೋಷ ತಂದಿದೆ. ನಮ್ಮ ಪ್ರಯತ್ನಗಳು ಫಲ ನೀಡಲಾರಂಭಿಸಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ವಿಶ್ವದ 189 ಉದ್ಯಮ ಸ್ನೇಹಿ ದೇಶಗಳ ಪಟ್ಟಿಯಲ್ಲಿ ಭಾರತ 142ನೇ ಸ್ಥಾನದಲ್ಲಿದೆ. ಕೆಲವು ಸಮಸ್ಯೆ ಬಗೆಹರಿಸಿದರೆ 100ರೊಳಗೆ ಬರಲಿದೆ. ಇದರಿಂದ ಇನ್ನಷ್ಟು ಹೂಡಿಕೆ ಬರಲಿದೆ ಎಂದು ಕಾಂತ್ ಹೇಳಿದ್ದಾರೆ. ಹೆಚ್ಚಿದ ಸ್ಪರ್ಧಾತ್ಮಕತೆ: ವಿಶ್ವದ ಪ್ರಮುಖ ಸ್ಪರ್ಧಾತ್ಮಕ ಆರ್ಥಿಕ ದೇಶಗಳ ಪಟ್ಟಿಯಲ್ಲಿ ಭಾರತ ಭಾರಿ ಮುನ್ನಡೆ ಸಾಧಿಸಿದೆ. ಈ ಪಟ್ಟಿಯಲ್ಲಿ 71ನೇ ಸ್ಥಾನದಲ್ಲಿದ್ದ ಭಾರತ 16 ಸ್ಥಾನಗಳನ್ನು ಹೆಚ್ಚಿಸಿಕೊಂಡಿದ್ದು 55ನೇ ಸ್ಥಾನಕ್ಕೆ ಏರಿದೆ.

ಕಳೆದ ಐದು ವರ್ಷಗಳಲ್ಲಿ ಭಾರತ ಈ ಪಟ್ಟಿಯಲ್ಲಿ ಕೆಳಮಟ್ಟಕ್ಕೆ ಇಳಿಯುತ್ತಾ ಸಾಗಿತ್ತು. ಇತ್ತೀಚೆಗೆ ಭಾರತದ ಆರ್ಥಿಕಯಲ್ಲಿ ಕಂಡ ಚೇತರಿಕೆ, ಆರ್ಥಿಕ ನೀತಿಗಳನ್ನು ಸಡಿಲಗೊಳಿಸಿದ್ದು, ಮೂಲಸೌಕರ್ಯ ಕ್ಷೇತ್ರದಲ್ಲಿ ತುಸು ಸುಧಾರಣೆ ಕಂಡಿರುವುದರಿಂದ ಏರಿಕೆ ಕಂಡಿದೆ ಎಂದು ವಿಶ್ವ ಆರ್ಥಿಕ ಸಂಸ್ಥೆ (ಡಬ್ಲ್ಯುಇಎಫ್) ತನ್ನ ಇತ್ತೀಚಿನ ಗ್ಲೋಬಲ್ ಕಾಂಪಿಟಿಟೀವ್‍ನೆಸ್ ವರದಿಯಲ್ಲಿ ಹೇಳಿದೆ. ಈ ಪಟ್ಟಿಯಲ್ಲಿ ಸ್ವಿಜರ್‍ಲೆಂಡ್ ಮೊದಲ ಸ್ಥಾನದಲ್ಲಿದ್ದು, ಸಿಂಗಾಪುರ, ಅಮೆರಿಕ, ಜರ್ಮನಿ, ಹಾಲೆಂಡ್, ಜಪಾನ್, ಹಾಂಕಾಂಗ್, ಫಿನ್‍ಲೆಂಡ್, ಸ್ವೀಡನ್, ಬ್ರಿಟನ್ ನಂತರ ಬರಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com