ವಾಣಿಜ್ಯ

ಫ್ಲಿಪ್ ಕಾರ್ಟ್ ಸಂಸ್ಥೆಗೆ ಮುಕೇಶ್ ಬನ್ಸಾಲ್ ರಾಜೀನಾಮೆ

ಮಾರುಕಟ್ಟೆ ತಜ್ಞ ಮುಕೇಶ್ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಜನವರಿ ತಿಂಗಳಿನಲ್ಲಿ ಸಿಇಒ ಸ್ಥಾನದಿಂದ ಸಚಿನ್ ಬನ್ಸಾಲ್ ಕೆಳಗಿಳಿದಿದ್ದರು.

ಫ್ಲಿಪ್ ಕಾರ್ಟ್ ಸಂಸ್ಥೆಗೆ ಮುಕೇಶ್ ಬನ್ಸಾಲ್ ರಾಜೀನಾಮೆ
ಮುಕೇಶ್ ಬನ್ಸಾಲ್
Published On :

ಬೆಂಗಳೂರು: ಭಾರತದ ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ .ಕಾಂ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಬದಲಾವಣೆಯಾದ ತಿಂಗಳೊಳಗೆ ಹಿರಿಯ ಅಧಿಕಾರಿಗಳಿಬ್ಬರು ಸಂಸ್ಥೆಗೆ ಗುಡ್ ಬೈ ಹೇಳಿದ್ದಾರೆ.

ಮಾರುಕಟ್ಟೆ ತಜ್ಞ ಮುಕೇಶ್ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಜನವರಿ ತಿಂಗಳಿನಲ್ಲಿ ಸಿಇಒ ಸ್ಥಾನದಿಂದ ಸಚಿನ್ ಬನ್ಸಾಲ್ ಕೆಳಗಿಳಿದಿದ್ದರು. ಸಹ ಸ್ಥಾಪಕ ಬಿನ್ನಿ ಬನ್ಸಾಲ್ ಅವರು ಸಿಇಒ ಆಗಿ ತಕ್ಷಣದಿಂದ ಅಧಿಕಾರವಹಿಸಿಕೊಳ್ಳುತ್ತಾರೆ ಎಂದು ಘೋಷಿಸಲಾಗಿತ್ತು. ಈಗ ವಾಣಿಜ್ಯ, ಜಾಹೀರಾತು ವಿಭಾಗದ ಮುಖ್ಯಸ್ಥ ಮುಕೇಶ್ ಬನ್ಸಾಲ್ ಅವರ ನಿರ್ಗಮನ ಫ್ಲಿಪ್ ಕಾರ್ಟ್ ಗೆ ಭಾರಿ ಹೊಡೆತ ನೀಡಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಮುಕೇಶ್ ಅಲ್ಲದೆ ಫ್ಲಿಪ್ ಕಾರ್ಟಿನ ಬಿಸಿನೆಸ್ ಅಧಿಕಾರಿ ಅಂಕಿತ್ ನಗೋರಿ ಕೂಡಾ ಸಂಸ್ಥೆ ತೊರೆದು ಕ್ರೀಡಾಕ್ಷೇತ್ರದಲ್ಲಿ ಹೊಸ ಉದ್ಯಮ ಆರಂಭಿಸುತ್ತಿದ್ದಾರೆ. ಮುಕೇಶ್ ಅವರು ಮಿಂಟ್ರಾ ಸಂಸ್ಥೆಯ ಮುಖ್ಯಸ್ಥರಾಗಿ ನಂ.1 ಫ್ಯಾಷನ್ ಪೋರ್ಟಲ್ ಆಗಿ ಹೊರಹೊಮ್ಮಲು ಕಾರಣರಾಗಿದ್ದರು.

2014ರಲ್ಲಿ ಮಿಂಟ್ರಾ.ಕಾಂ ಸಂಸ್ಥೆಯ ಫ್ಲಿಪ್ ಕಾರ್ಟ್ ಖರೀದಿಸಿತ್ತು. ಫ್ಲಿಪ್ ಕಾರ್ಟ್ ತೊರೆದರೂ ಸಲಹೆಗಾರರ ಸಮಿತಿಯಲ್ಲಿ ಮುಕೇಶ್ ಮುಂದುವರೆಯಲಿದ್ದಾರೆ ಎಂದು ಹೇಳಲಾಗಿದೆ. 2007ರಲ್ಲಿ ಮಿಂಟ್ರಾ ಆನ್ ಲೈನ್ ಶಾಂಪಿಂಗ್ ವೆಬ್ ಸೈಟ್ ಆರಂಭಿಸಿದ ಐಐಟಿ ಖರಗ್ ಪುರದ ಪದವೀಧರರಾದ ಮುಕೇಶ್ ಅವರು ಇ ಕಾಮರ್ಸ್ ಕ್ಷೇತ್ರದ ಪ್ರಮುಖರಲ್ಲಿ ಒಬ್ಬರೆನಿಸಿದ್ದಾರೆ. ಸುಮಾರು 2,000 ಕೋಟಿ ರು ಗಳಿಗೆ ಮಿಂಟ್ರಾ.ಕಾಂ ಅನ್ನು ಫ್ಲಿಪ್ ಕಾರ್ಟಿಗೆ ಮಾರಾಟ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.