ಸೆನ್ಸೆಕ್ಸ್ ಗೆ ಸುಸ್ತು

ಡ್ರ್ಯಾಗನ್ ಹೊಡೆತಕ್ಕೆ ಜಾಗತಿಕ ಪೇಟೆಗಳು ಮತ್ತೆ ತತ್ತರಿಸಿವೆ. ಚೀನಾ ತನ್ನ ಕರೆನ್ಸಿ ಯುಆನ್ ಅಪಮೌಲ್ಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಮುಂಬೈ: ಡ್ರ್ಯಾಗನ್ ಹೊಡೆತಕ್ಕೆ ಜಾಗತಿಕ ಪೇಟೆಗಳು ಮತ್ತೆ ತತ್ತರಿಸಿವೆ. ಚೀನಾ ತನ್ನ ಕರೆನ್ಸಿ ಯುಆನ್ ಅಪಮೌಲ್ಯಗೊಳಿಸಿದ್ದರಿಂದ ಗುರುವಾರ ಭಾರತ ಸೇರಿದಂತೆ ಏಷ್ಯಾದ ಎಲ್ಲ ಷೇರು ಮಾರುಕಟ್ಟೆ ಸೂಚ್ಯಂಕಗಳು ಮೂರು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿವೆ. 
ಚೀನಾದ ಶಾಂಘೈ ಷೇರು ಮಾರುಕಟ್ಟೆ ಸೂಚ್ಯಂಕ ಶೇ.7ರಷ್ಟು ಕುಸಿದು ವಹಿವಾಟು ಸ್ಥಗಿತಗೊಳ್ಳುವಂತಾಯಿತು. ಮಂಗಳವಾರ ಭಾರಿ ಮಾರಾಟ ಒತ್ತಡಕ್ಕೆ ಸಿಲುಕಿದ್ದ ದೇಶೀಯ ಷೇರುಪೇಟೆಗಳು ಗುರುವಾರ ಮತ್ತೆ ತತ್ತರಿಸಿದವು. ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ 554.50 ಅಂಕ ಇಳಿದು 24,851.83ಕ್ಕೆ ಕುಸಿಯಿತು. 
ಇದು ಕಳೆದ 19 ತಿಂಗಳಲ್ಲೇ ಕನಿಷ್ಠ ಹಂತವಾಗಿದೆ ಮತ್ತು ಈ ವರ್ಷದ ಗರಿಷ್ಠ ಏಕದಿನ ಕುಸಿತವಾಗಿದೆ. ಭೀತಿಗೊಂಡ ಹೂಡಿಕೆದಾರರು ಎಲ್ಲ ವಲಯದ ಷೇರುಗಳ ಮಾರಾಟದಲ್ಲಿ ತೊಡಗಿದ್ದರು. ರಿಯಾಲ್ಟಿ, ಮೂಲಸೌಕರ್ಯ, ಆಟೋ, ಲೋಹ, ವಿದ್ಯುತ್, ತೈಲ ಮತ್ತು ಅನಿಲ ಸೇರಿದಂತೆ ಎಲ್ಲ ಷೇರುಗಳು ಮಾರಾಟ ಒತ್ತಡಕ್ಕೆ ಸಿಲುಕಿದ್ದವು. ಕಳೆದ ಜೂನ್ 4ರ 24,805.83ರ ನಂತರ ಇದು ಅತ್ಯಂತ ಕನಿಷ್ಠ ಹಂತವಾಗಿದೆ. ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 172.70 ಅಂಕ ಕುಸಿತದೊಂದಿಗೆ 7,568.30ಕ್ಕೆ ತಲುಪಿತು.
ಕುಸಿದದ್ದು ಏಕೆ?: ಯುಆನ್ ಅಪಮೌಲ್ಯ: ಪೀಪಲ್ಸ್ ಬ್ಯಾಂಕ್ ಆ_ï ಚೀನಾ ಗುರುವಾರ ತನ್ನ ಕರೆನ್ಸಿ ಯುಆನ್ ಅನ್ನು ಶೇ.0.50ರಷ್ಟು ಅಪಮೌಲ್ಯಗೊಳಿಸಿತು. ಕಳೆದ ಆಗಸ್ಟ್ ನಂತರ ದಲ್ಲಿ ಇದು ಅತಿಹೆಚ್ಚಿನ ಅಪಮೌಲ್ಯವಾಗಿದೆ. ಚೀನಾ ಆರ್ಥಿಕ ಪ್ರಗತಿ ಅಂದಾಜಿಗಿಂತಲೂ ಹೆಚ್ಚು ಹಿಂಜರಿತ ಕಾಣುತ್ತಿದೆ. ಬ್ಯಾಂಕ್ ತನ್ನ ಕರೆನ್ಸಿಯನ್ನು ಅಪಮೌಲ್ಯಗೊಳಿಸುತ್ತಿದೆ.
ಚೀನಾದ ಈ ಕ್ರಮದಿಂದ ಏಷ್ಯಾ ಮತ್ತು ಇತರೆ ಪ್ರಮುಖ ದೇಶಗಳು ತಮ್ಮ ಕರೆನ್ಸಿಯನ್ನು ಅಪಮೌಲ್ಯಗೊಳಿಸುವ ಆತಂಕಗಳು ಎದುರಾಗಿವೆ. ಕಳೆದ ನಾಲ್ಕು ವಹಿವಾಟು ಅವಧಿಗಳಲ್ಲಿ ಶಾಂಘೈ ವಹಿವಾಟು ಎರಡನೇ ಬಾರಿಗೆ ಸ್ಥಗಿತಗೊಂಡಿತು. 
ಕಚ್ಚಾ ತೈಲ 11 ವರ್ಷಗಳಲ್ಲಿ ಕನಿಷ್ಠ: ಪ್ರಮುಖ ತೈಲ ಉತ್ಪಾದನೆ ದೇಶಗಳು ಕಚ್ಚಾ ತೈಲ ಉತ್ಪಾದನೆ ಕಡಿತಗೊಳಿಸುವ ಯಾವುದೇ ಸೂಚನೆಗಳು ಇಲ್ಲದಿದ್ದರಿಂದ ಮತ್ತು ಬೇಡಿಕೆ ಕಡಿಮೆಯಾಗಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕಳೆದ ಹನ್ನೊಂದು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರಲ್ ದರ 34.95 ಡಾಲರ್‍ಗೆ ಇಳಿದಿದೆ. 2004ರ ನಂತರದಲ್ಲಿ ಕನಿಷ್ಠ ಹಂತವಾಗಿದೆ. 
ಕುಸಿದ ಸವರಿನ್ ರೇಟಿಂಗ್ಸ್: ಎಲ್ಲ ದೇಶಗಳ ಸಾರ್ವಭೌಮನಿಧಿ ರೇಟಿಂಗ್ಸ್ ಈ ವರ್ಷದಲ್ಲಿ ಕುಸಿಯಲಿದೆ ಎಂಬ ಜಾಗತಿಕ ಆರ್ಥಿಕ ವಿಶ್ಲೇಷಣಾ ಸಂಸ್ಥೆ ಸ್ಟಾಂಡರ್ಡ್ ಆ್ಯಂಡ್ ಪೂರ್ಸ್ ವರದಿಯೂ ಪೇಟೆಗಳಿಗೆ ಹೊರೆಯಾಯಿತು. ವಿಶ್ವದ 131 ಸವರಿನ್ ರೇಟಿಂಗ್ಸ್‍ನಲ್ಲಿ 25 ನಕಾರಾತ್ಮಕವಾಗಿದ್ದರೆ, ಕೇಲವ 8 ಮಾತ್ರ ಸಕಾರಾತ್ಮಕವಾಗಿವೆ. ನಕಾರಾತ್ಮಕ ರೇಟಿಂಗ್ ದೇಶಗಳೇ ಹೆಚ್ಚಾಗಿರುವುದು ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com