ಕುಸಿತ ಮುಂದುವರೆಸಿದ ಷೇರುಪೇಟೆ

ದೇಶೀಯ ಷೇರು ಮಾರುಕಟ್ಟೆಗಳು ಕುಸಿತ ಮುಂದುವರೆಸಿವೆ. ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 317.93 ಅಂಕ ನಷ್ಟ ಕಂಡು 24,455.04ಕ್ಕೆ ಕುಸಿದಿದೆ...
ಸೆನ್ಸೆಕ್ಸ್ (ಸಂಗ್ರಹ ಚಿತ್ರ)
ಸೆನ್ಸೆಕ್ಸ್ (ಸಂಗ್ರಹ ಚಿತ್ರ)

ಮುಂಬೈ: ದೇಶೀಯ ಷೇರು ಮಾರುಕಟ್ಟೆಗಳು ಕುಸಿತ ಮುಂದುವರೆಸಿವೆ. ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 317.93 ಅಂಕ ನಷ್ಟ ಕಂಡು 24,455.04ಕ್ಕೆ ಕುಸಿದಿದೆ.

ಸೆನ್ಸೆಕ್ಸ್ ನ ಈ ಹಂತ ಕಳೆದ 19 ತಿಂಗಳಲ್ಲಿಯೇ ಕನಿಷ್ಠವಾಗಿದೆ. ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 99 ಅಂಕ ನಷ್ಟದೊಂದಿಗೆ 7,437.80ಕ್ಕೆ ತಲುಪಿದೆ.ವಹಿವಾಟಿನ ಬಹುತೇಕ  ಅವಧಿಯಲ್ಲಿ ಮಾರುಕಟ್ಟೆ ನೆಗೆಟಿವ್ ವಲಯದಲ್ಲೇ ಮುನ್ನಡೆದಿತ್ತು. ಮಧ್ಯಾವಧಿ ನಂತರ ಜಾಗತಿಕ ಮಾರುಕಟ್ಟೆಗಳಲ್ಲಿ ಕುಸಿತ ಕಂಡಿದ್ದರಿಂದ ಮತ್ತು ಕಚ್ಚಾ ತೈಲ ದರ ಮತ್ತಷ್ಟು ಕುಸಿದಿದ್ದರಿಂದ  ಹೂಡಿಕೆದಾರರು ಹೆಚ್ಚಿನ ಮಾರಾಟದಲ್ಲಿ ತೊಡಗಿದರು.

ರೂಪಾಯಿ ಮೌಲ್ಯ ಸಹ 29 ತಿಂಗಳಲ್ಲೇ ಕನಿಷ್ಠ 67.70ಕ್ಕೆ ಕುಸಿದಿದ್ದು ಹೂಡಿಕೆದಾರರಲ್ಲಿ ಮತ್ತಷ್ಟು ಭೀತಿ ತಂದಿತು. ವಹಿವಾಟು ಸಕಾರಾತ್ಮಕವಾಗಿಯೇ ಆರಂಭವಾಯಿತು. ಒಂದು ಹಂತದಲ್ಲಿ  ದಿನದ ಗರಿಷ್ಠ 24,912.64ಕ್ಕೆ ಏರಿಕೆ ಕಂಡಿತ್ತು. ಆದರೂ ಏರಿಕೆಯನ್ನು ಕಾಯ್ದುಕೊಳ್ಳುವಲ್ಲಿ ಮಾರುಕಟ್ಟೆ ವಿಫಲವಾಯಿತು. ರಿಯಾಲ್ಟಿ, ವಿದ್ಯುತ್, ಬ್ಯಾಂಕಿಂಗ್, ಪಿಎಸ್‍ಯು, ಮೂಲಸೌಕರ್ಯ  ಹೆಚ್ಚು ನಷ್ಟ ಕಂಡವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com