ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದೇಶದ ರಫ್ತು ಕುಸಿತ, ಏರಿದ ಚಿನ್ನ

ದೇಶದ ರಫ್ತು ವಹಿವಾಟು ಕಳೆದ 13 ತಿಂಗಳಿಂದ ಸತತವಾಗಿ ಕುಸಿಯುತ್ತಿದೆ. ಡಿಸೆಂಬರ್‍ನಲ್ಲಿ ಕುಸಿತ ಮುಂದುವರೆದಿದ್ದು ಶೇ.14.75ರಷ್ಟು ಕುಸಿದು 2,220 ಕೋಟಿ ಡಾಲರ್‍ಗೆ ತಲುಪಿದೆ...

ನವದೆಹಲಿ: ದೇಶದ ರಫ್ತು ವಹಿವಾಟು ಕಳೆದ 13 ತಿಂಗಳಿಂದ ಸತತವಾಗಿ ಕುಸಿಯುತ್ತಿದೆ. ಡಿಸೆಂಬರ್‍ನಲ್ಲಿ ಕುಸಿತ ಮುಂದುವರೆದಿದ್ದು ಶೇ.14.75ರಷ್ಟು ಕುಸಿದು 2,220 ಕೋಟಿ ಡಾಲರ್‍ಗೆ ತಲುಪಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಂಠಿತಗೊಂಡಿರುವುದರಿಂದ ಪೆಟ್ರೋಲಿಯಂ ಉತ್ಪನ್ನ ಮತ್ತು ಎಂಜಿನಿಯರಿಂಗ್ ಸಾಧನಗಳ ರಫ್ತು ಭಾರಿ ಪ್ರಮಾಣದಲ್ಲಿ ಕುಸಿದಿದೆ. ಇದೇ ಸಂದರ್ಭದಲ್ಲಿ ದೇಶದ ಆಮದಿನಲ್ಲಿಯೂ ಶೇ.3.88ರಷ್ಟು ಕುಸಿತ ಕಂಡಿದ್ದು 3,396 ಕೋಟಿ ಡಾಲರ್‍ಗೆ ತಲುಪಿದೆ. ಇದೇ ತಿಂಗಳಲ್ಲಿ ಚಿನ್ನದ ಆಮದಿನಲ್ಲಿ ಶೇ.175ರಷ್ಟು ಏರಿಕೆ ದಾಖಲಾಗಿದೆ.

2014ರ ಡಿಸೆಂಬರ್ ನಲ್ಲಿ 136 ಕೋಟಿ ಡಾಲರ್ ಮೌಲ್ಯದ ಚಿನ್ನ ಆಮದು ಮಾಡಿಕೊಂಡಿದ್ದರೆ, ಕಳೆದ ಡಿಸೆಂಬರ್‍ನಲ್ಲಿ ಈ ಮೌಲ್ಯ 380 ಕೋಟಿ ಡಾಲರ್‍ಗೆ ತಲುಪಿದೆ. ಇದರಿಂದಾಗಿ ದೇಶದ ವಾಣಿಜ್ಯ ಕೊರತೆ ನಾಲ್ಕು ತಿಂಗಳಲ್ಲಿ ಗರಿಷ್ಠ 1,166 ಕೋಟಿ ಡಾಲರ್‍ಗೆ ಮುಟ್ಟಿದೆ. 2014ರ ಡಿಸೆಂಬರ್‍ನಲ್ಲಿ ವಾಣಿಜ್ಯ ಕೊರತೆ 917 ಕೋಟಿ ಡಾಲರ್ ಇತ್ತು. ಡಿಸೆಂಬರ್‍ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಶೇ.47.69ರಷ್ಟು ಕುಸಿದು 236 ಕೋಟಿ ಡಾಲರ್ ತಲುಪಿದೆ. ಇದೇ ತಿಂಗಳಲ್ಲಿ ಕಬ್ಬಿಣ ಅದಿರು ರಫ್ತು ಶೇ.69.54ರಷ್ಟು ಕುಸಿದಿದ್ದು 212.4 ಕೋಟಿ ಡಾಲರ್‍ಗೆ ಇಳಿದಿದೆ.

ಇದರ ಹಿಂದಿನ ತಿಂಗಳು ನವೆಂಬರ್ ನಲ್ಲಿಯೂ ಎಂಜಿನಿಯರಿಂಗ್ ಸಾಧನಗಳ ರಫ್ತು ಗಣನೀಯವಾಗಿ ಅಂದರೆ ಶೇ.15.68ರಷ್ಟು ಕುಸಿದಿತ್ತು. ವಜ್ರ ಮತ್ತು ಆಭರಣ ರಫ್ತು ಶೇ.7.75ರಷ್ಟು ಇಳಿಮುಖ ಕಂಡಿತ್ತು. ಪ್ರಸಕ್ತ ಹಣಕಾಸು ಸಾಲಿನ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಒಟ್ಟಾರೆ ರಫ್ತು ಶೇ.18.06ರಷ್ಟು ಕುಸಿದಿದೆ. ಚಿನ್ನದ ಆಮದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸೋಮವಾರ ಆಮದು ದರವನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com