ಸನೋಫಿ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಮಲ್ಯ ರಾಜಿನಾಮೆ

ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಪ್ರಮುಖ ಔಷಧ ಸಂಸ್ಥೆ ಸನೋಫಿ...
ವಿಜಯ್ ಮಲ್ಯ
ವಿಜಯ್ ಮಲ್ಯ
Updated on: 
ಮುಂಬೈ: ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಪ್ರಮುಖ ಔಷಧ ಸಂಸ್ಥೆ ಸನೋಫಿ ಇಂಡಿಯಾದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಗುರುವಾರ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಸುಮಾರು 33 ವರ್ಷಗಳ ಬಳಿಕ ಸನೋಫಿ ಇಂಡಿಯಾ ಲಿಮಿಟೆಡ್ (ಎಸ್​ಐಎಲ್) ಅಧ್ಯಕ್ಷ ಸ್ಥಾನದಿಂದ ಉದ್ಯಮಿ ವಿಜಯ್ ಮಲ್ಯ ಕೆಳಗಿಳಿದಿದ್ದಾರೆ. ಕಂಪೆನಿಯ ಮುಂಬರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ದೇಶಕರಾಗಿ ಪುನರಾಯ್ಕೆ ಕೋರದೇ ಇರುವ ಬಗೆಗಿನ ತಮ್ಮ ನಿರ್ಧಾರವನ್ನು ಮಲ್ಯ ಅವರು ಕಂಪೆನಿಗೆ ತಿಳಿಸಿದ್ದಾರೆ.
ವಿಜಯ್ ಮಲ್ಯ ಅವರು 1973ರಲ್ಲಿ ಮೊತ್ತ ಮೊದಲ ಬಾರಿಗೆ ಸನೋಫಿ ಇಂಡಿಯಾ ನಿರ್ದೇಶಕರಾಗಿ ಕಂಪೆನಿಗೆ ಸೇರ್ಪಡೆಯಾಗಿದ್ದರು. ಆಗ ಕಂಪೆನಿಗೆ ಹೊಚೆಸ್ಟ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ಎಂಬ ಹೆಸರಿತ್ತು. ಬಳಿಕ 1983ರ ಡಿಸೆಂಬರ್​ನಿಂದ ಮಲ್ಯ ಅವರು ಕಂಪೆನಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
‘ಹೊಚೆಸ್ಟ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ಹೆಸರಿನಲ್ಲಿ ಆರಂಭವಾದ ಈ ಕಂಪೆನಿಯ ಮಂಡಳಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಸೌಭಾಗ್ಯ ನನ್ನದಾಗಿತ್ತು. ಅದರ ಬೆಳವಣಿಗೆ ಮತ್ತು ಸಮೃದ್ಧಿಯಲ್ಲಿ ಇಷ್ಟೊಂದು ಸುದೀರ್ಘ ಕಾಲ ನಾನು ಪಾಲ್ಗೊಂಡಿದ್ದೇನೆ’ ಎಂದು ತಮ್ಮ ವಿದಾಯ ಹೇಳಿಕೆಯಲ್ಲಿ ಮಲ್ಯ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com