ಷೇರುಪೇಟೆಯಲ್ಲಿ ಗೂಳಿ ಓಟ; ಸೆನ್ಸೆಕ್ಸ್ 400 ಅಂಕ ಏರಿಕೆ

ಭಾರತೀಯ ಷೇರುಮಾರುಕಟ್ಟೆಯಲ್ಲಿ ಬುಧವಾರ ಗೂಳಿ ಓಟ ಆರಂಭವಾಗಿದ್ದು, ಸೆನ್ಸೆಕ್ಸ್ ಬರೊಬ್ಬರಿ 400 ಅಂಕಗಳ ಏರಿಕೆ ಕಂಡಿದೆ...
ಸೆನ್ಸೆಕ್ಸ್ (ಸಂಗ್ರಹ ಚಿತ್ರ)
ಸೆನ್ಸೆಕ್ಸ್ (ಸಂಗ್ರಹ ಚಿತ್ರ)

ಮುಂಬೈ: ಭಾರತೀಯ ಷೇರುಮಾರುಕಟ್ಟೆಯಲ್ಲಿ ಬುಧವಾರ ಗೂಳಿ ಓಟ ಆರಂಭವಾಗಿದ್ದು, ಸೆನ್ಸೆಕ್ಸ್ ಬರೊಬ್ಬರಿ 400 ಅಂಕಗಳ ಏರಿಕೆ ಕಂಡಿದೆ.

ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ನ ಅಧ್ಯಕ್ಷ ಜನೆಚ್ ಎಲೆನ್ ಬಡ್ಡಿ ದರಗಳನ್ನು ಏರಿಕೆ ಮಾಡುವ ಕುರಿತು ಮುನ್ಸೂಚನೆ ನೀಡಿದ್ದ ಬೆನ್ನಲ್ಲೇ ಭಾರತೀಯ ಷೇರುಗಳಿಗೆ ವ್ಯಾಪಕ ಬೇಡಿಕೆ  ಹೆಚ್ಚಾಗಿದ್ದು, ಇಂದು ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ ಬರೊಬ್ಬರಿ 400 ಅಂಕಗಳ ಏರಿಕೆ ಕಂಡಿದೆ. ಮಧ್ಯಾಹ್ನ 2.35ರ ಸುಮಾರಿನಲ್ಲಿ ಸೆನ್ಸೆಕ್ಸ್ ಒಟ್ಟು 435.01 ಅಂಕಗಳ ಏರಿಕೆಯೊಂದಿಗೆ  25,335.47ಕ್ಕೇರಿದೆ.

ಇನ್ನು ನಿಫ್ಟಿ ಕೂಡ 138 ಅಂಕಗಳ ಏರಿಕೆಯೊಂದಿಗೆ 7,735ಕ್ಕೇರಿದೆ. ದಿನದ ವಹಿವಾಟಿನಲ್ಲಿ ಪ್ರಮುಖವಾಗಿ ಉಕ್ಕು ಸಂಸ್ಥೆಯ ಷೇರುಗಳು ಮತ್ತು ಬ್ಯಾಕಿಂಗ್ ಕ್ಷೇತ್ರಕ್ಕೆ ಹೆಚ್ಚಿನ ಲಾಭವಾಗಿದೆ. ಇನ್ನು  ದಿನದ ವಹಿವಾಟಿನಲ್ಲಿ ಬ್ರಿಟನ್ ನಲ್ಲಿ ನಷ್ಟದಲ್ಲಿರುವ ಟಾಟಾ ಸ್ಟೀಲ್ ಸಂಸ್ಥೆಯನ್ನು ಮಾರಾಟ ಮಾಡುವ ಕುರಿತು ಸಂಸ್ಥೆ ತೆಗೆದುಕೊಂಡ ನಿರ್ಧಾರ ಕೂಡ ಪರಿಣಾಮ ಬೀರಿದೆ ಎಂದು  ಹೇಳಲಾಗುತ್ತಿದೆ.

ಇಂದಿನ ವಹಿವಾಟಿನಲ್ಲಿ ಐಸಿಸಿಐ ಬ್ಯಾಂಕ್ ಲಾಭ ಕಂಡ ಪ್ರಮುಖ ಸಂಸ್ಥೆಯಾಗಿದ್ದು, ಉಳಿದಂತೆ ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್  ಇಂಡಿಯಾದ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com