ಪ್ರಯಾಣಿಕರ ವಿಭಾಗದಲ್ಲಿ ರೈಲ್ವೆ ಇಲಾಖೆ ಸುಮಾರು 48,000 ಕೋಟಿ ಲಾಭಗಳಿಸಿದ್ದು, ಕಳೆದ ವರ್ಷಕ್ಕಿಂತಲೂ 2,000 ಕೋಟಿ ರೂ ಅಧಿಕ ಲಾಭ ಗಳಿಸಿದೆ. ಇನ್ನು ಸರಕು ಸಾಗಣೆ ವಿಭಾಗದಲ್ಲಿ ಕಳೆದ ಬಾರಿ 1.04 ಲಕ್ಷ ಕೋಟಿ ಲಾಭವಾಗಿದ್ದರೆ ಈ ವರ್ಷ 1.09 ಲಕ್ಷ ಕೋಟಿ ಲಾಭ ಉಂಟಾಗಿದೆ. ಉಳಿದಂತೆ ಜಾಹೀರಾತು, ಸ್ಕ್ರ್ಯಾಪ್ ಮಾರಾಟ ಸೇರಿದಂತೆ ವಿವಿಧ ಮೂಲಗಳಿಂದ 11,000 ಕೋಟಿ ಲಾಭ ಬಂದಿದೆ.