ಜಿಯೋ ಗೆ ಸಡ್ಡುಹೊಡೆಯಲು ಬರುತ್ತಿದೆ ಏರ್ ಟೇಲ್ 4ಜಿ ಫೋನ್

ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್‌ಟೆಲ್ ದೀಪಾವಳಿ ವೇಳೆಗೆ ಕಡಿಮೆ ಬೆಲೆಗೆ 4ಜಿ ಸ್ಮಾರ್ಟ್‌ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.
ಏರ್ ಟೆಲ್ ಲೋಗೋ
ಏರ್ ಟೆಲ್ ಲೋಗೋ
ಹೊಸದಿಲ್ಲಿ:: ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್‌ಟೆಲ್ ದೀಪಾವಳಿ ವೇಳೆಗೆ ಕಡಿಮೆ ಬೆಲೆಗೆ 4ಜಿ ಸ್ಮಾರ್ಟ್‌ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಫೀಚರ್ ಫೋನ್‌ ಗೆ ಎದುರಾಗಿ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಏರ್‌ಟೆಲ್ ಗ್ರಾಹಕರಿಗೆ ಕಡಿಮೆ ವೆಚ್ಚದ 4ಜಿ ಸ್ಮಾರ್ಟ್‌ ಫೋನ್ ನೀಡುವುದಕ್ಕೆ ತೀರ್ಮಾನಿಸಿದೆ.
ಏರ್‌ಟ್‌ಲ್ ಪರಿಚಯಿಸಲು ಇಚ್ಚಿಸಿರುವ  ಸ್ಮಾರ್ಟ್‌ಫೋನ್ ಪ ಬೆಲೆ  ಕೇವಲ 2500 ರೂ. 
ಭಾರತದ ಟಾಪ್ ಟೆಲಿಕಾಂ ಮತ್ತು ಹ್ಯಾಡ್‌ಸೆಟ್ ತಯಾರಕರ ಸಹಯೋಗದಲ್ಲಿ ಏರ್‌ಟೆಲ್ 4ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಆಗಲಿದ್ದು ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಎಲ್ಲ ಆ್ಯಪ್‌‌ಗಳನ್ನು ಡೌನ್‌ಲೋಡ್ ಮಾಡಲು ಇದು ಅವಕಾಶ ನೀಡಲಿದೆ.
ಏರ್ ಟೆಲ್ ನ ಈ ಸ್ಮಾರ್ಟ್‌ಫೋನ್, ದೊಡ್ಡ ಸ್ಕ್ರೀನ್, ಉತ್ತಮ ಕ್ಯಾಮೆರಾ ವ್ಯವಸ್ಥೆ ಹಾಗೂ ಉತ್ಕೃಷ್ಟ ಬ್ಯಾಟರಿ ಸಾಮರ್ಥ್ಯದ ಜತೆ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಸಂಸ್ಥೆಯ ಹಿರಿಯ ಉದ್ಯಮ ಕಾರ್ಯನಿರ್ವಾಹಕರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com