ಮಲ್ಯಗೆ ಭಾರಿ ಹಿನ್ನಡೆ: ಯುಬಿಹೆಚ್ಎಲ್ ಮುಚ್ಚುವಂತೆ ಹೈಕೋರ್ಟ್ ಆದೇಶ

ಮಹತ್ವದ ಬೆಳವಣಿಗೆಯಲ್ಲಿ ಉದ್ಯಮಿ ವಿಜಯ್ ಮಲ್ಯಗೆ ಕರ್ನಾಟಕ ಹೈಕೋರ್ಟ್ ಭಾರಿ ಪೆಟ್ಟು ನೀಡಿದ್ದು, ಮಲ್ಯ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಯುನೈಟೆಡೆ ಬ್ರೇವರೀಸ್ ಸಂಸ್ಥೆಯನ್ನು ಮುಚ್ಚುವಂತೆ ಆದೇಶ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಉದ್ಯಮಿ ವಿಜಯ್ ಮಲ್ಯಗೆ ಕರ್ನಾಟಕ ಹೈಕೋರ್ಟ್ ಭಾರಿ ಪೆಟ್ಟು ನೀಡಿದ್ದು, ಮಲ್ಯ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಯುನೈಟೆಡೆ ಬ್ರೇವರೀಸ್ ಸಂಸ್ಥೆಯನ್ನು ಮುಚ್ಚುವಂತೆ  ಆದೇಶ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಬ್ಯಾಂಕುಗಳ ಸಲ್ಲಿಕೆ ಮಾಡಿದ್ದ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ವಿನೀತ್ ಕೋಠಾರಿ ಅವರು, ಯುಬಿಹೆಚ್ಎಲ್ ಸಂಸ್ಥೆಯನ್ನು ಮುಚ್ಚುವಂತೆ ಆದೇಶ  ನೀಡಿದ್ದಾರೆ. ಅಲ್ಲದೆ ಸಂಸ್ಥೆಗೆ ಸಂಬಂಧಿಸಿದ ಎಲ್ಲ ಆಸ್ತಿ-ಪಾಸ್ತಿಗಳನ್ನು ಲೆಕ್ಕಾ ಹಾಕಲು ಮತ್ತು ಮಾರಾಟ ಮಾಡಲು ಅಫಿಷಿಯಲ್ ಲಿಕ್ವಿಡೇಟರ್ ನೇಮಕ ಮಾಡಿ ಆದೇಶ ಹೊರಡಿಸಿದೆ.

ದೇಶ ವಿವಿಧ ಪ್ರಮುಖ ಬ್ಯಾಂಕುಗಳಿಂದ ಭಾರಿ ಪ್ರಮಾಣದ ಸಾಲ ಮಾಡಿದ್ದ ವಿಜಯ್ ಮಲ್ಯ ಅದನ್ನು ಪಾವತಿ ಮಾಡದೇ ವಿದೇಶಕ್ಕೆ ಹಾರಿದ್ದರು. ಇದೀಗ ಮಲ್ಯ ಸಾಲಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮೆಟ್ಟಿಲೇರಿದ್ದ ವಿವಿಧ  ಬ್ಯಾಂಕುಗಳು ಮಲ್ಯ ಸಾಲಕ್ಕೆ ಗ್ಯಾರಂಟರ್ ಆಗಿ (ಜಾಮೀನು) ಯುಬಿಹೆಚ್ ಎಲ್ ಸಂಸ್ಥೆ ಸಹಿ ಮಾಡಿತ್ತು. ಆದರೆ ಮಲ್ಯ ಸಾಲ ಮರುಪಾವತಿ ಮಾಡದೇ ವಿದೇಶಕ್ಕೆ ಪಲಾಯನ ಮಾಡಿದ್ದು, ಸಾಲಕ್ಕೆ ಜಾಮೀನು ನೀಡಿದ್ದ ಯುಬಿಹೆಚ್  ಎಲ್ ಸಂಸ್ಥೆಯನ್ನು ಮುಚ್ಚಿ,  ಸಂಸ್ಥೆಯ ಆಸ್ತಿಗಳನ್ನು ಮಾರಾಟ ಮಾಡಿ ಸಾಲ ಪಾವತಿ ಮಾಡುವಂತೆ ಸೂಚನೆ ನೀಡಬೇಕು ಎಂದು ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದವು. ಯುಬಿಹೆಚ್ ಎಲ್ ನಲ್ಲಿ ವಿಜಯ್ ಮಲ್ಯ ಶೇ.52 ರಷ್ಟು ಷೇರುಗಳನ್ನು ಹೊಂದಿದ್ದಾರೆ.

ಕಿಂಗ್ ಫಿಶರ್, ಐಡಿಬಿಐ ಬ್ಯಾಂಕುಗಳ ಮಾಜಿ ಅಧಿಕಾರಿಗಳ ಬಂಧನದ ಅವಧಿ ಫೆಬ್ರವರಿ 20ರವರೆಗೂ ವಿಸ್ತರಣೆ
ಏತನ್ಮಧ್ಯೆ ಇದೇ ವಿಜಯ್ ಮಲ್ಯ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮುಂಬೈನಲ್ಲಿ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಕಿಂಗ್ ಫಿಷರ್ ವಿಮಾನ ಸಂಸ್ಥೆ ಹಾಗೂ ಐಡಿಬಿಐ ಬ್ಯಾಂಕ್ ನ ಒಟ್ಟು 9 ಮಂದಿ  ಮಾಜಿ ಸಿಬ್ಬಂದಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಫೆಬ್ರವರಿ 20ರವರೆಗೂ ವಿಸ್ತರಣೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com