ಭಿನ್ನಾಭಿಪ್ರಾಯ ಇರುವುದನ್ನು ನಿರಾಕರಿಸಿರುವ ಸಿಇಒ ವಿಶಾಲ್ ಸಿಕ್ಕಾ, ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ಹೇಳಿದ್ದಾರೆ. ಇನ್ಫೋಸಿಸ್ ಸ್ಥಾಪಕರೊಂದಿಗೆ ನಾನು ಅತ್ಯುತ್ತಮ ಬಾಂಧವ್ಯ, ಸಂಪರ್ಕ ಹೊಂದಿದ್ದೇನೆ. ನಾರಾಯಣ ಮೂರ್ತಿ ಅವರನ್ನು ವರ್ಷದಲ್ಲಿ ಕನಿಷ್ಠ 4-6 ಬಾರಿ ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ.