ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 1.12 ರು. ಡಿಸೇಲ್ 1.24 ರು. ಇಳಿಕೆ

ವಾಹನ ಸವಾರರಿಗೆ ಸಿಹಿ ಸುದ್ದಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಇಳಿಕೆಯಾಗಿದೆ...
ಪೆಟ್ರೋಲ್ ಬಂಕ್
ಪೆಟ್ರೋಲ್ ಬಂಕ್
ನವದೆಹಲಿ: ವಾಹನ ಸವಾರರಿಗೆ ಸಿಹಿ ಸುದ್ದಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಇಳಿಕೆಯಾಗಿದೆ. 
ನಾಳೆಯಿಂದ ದೇಶಾದ್ಯಂತ ಪ್ರತಿದಿನವೂ ಪೆಟ್ರೋಲ್ ಮತ್ತು ಡಿಸೇಲ್ ದರ ಪರಿಷ್ಕರಣೆಗೊಳ್ಳಲಿದ್ದು ಈ ಮಧ್ಯೆ ಪೆಟ್ರೋಲ್ ಪ್ರತಿ ಲೀಟರ್ ಗೆ 1.12 ರುಪಾಯಿ ಮತ್ತು ಡಿಸೇಲ್ ಪ್ರತಿ ಲೀಟರ್ ಗೆ 1.24 ರುಪಾಯಿ ಇಳಿಕೆಯಾಗಿದೆ. ಈ ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ದರ ಕಡಿಮೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com