ನವದೆಹಲಿ: ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಮಾನ್ಸೂನ್ ಮೆಗಾ ಸೇಲ್ ಆಫರ್ ನೀಡಿದ್ದು, ಟಿಕೆಟ್ ಬೆಲೆಯಲ್ಲಿ ಭಾರಿ ಆಫರ್ ನೀಡಿದೆ.
699 ರೂಗೆ ವಿಮಾನಯಾನ ಸೇವೆ ಕಲ್ಪಿಸಲು ಮುಂದಾಗಿದೆ. ಮೊದಲು ಬಂದವರಿಗೆ ಆದ್ಯತೆ ನೀಡುವುದಾಗಿ ಘೋಷಿಸಿರುವ ಸ್ಪೈಸ್ ಜೆಟ್, ಈ ಆಫರ್ ನಲ್ಲಿ ದೇಶಿಯ ವಿಮಾನ ಯಾನಕ್ಕೆ 699 ರು ಆರಂಭಿಕ ಟಿಕೆಟ್ ದರ ನಿಗದಿಗೊಳಿಸಿದೆ.
ಜಮ್ಮು-ಶ್ರೀನಗರ, ಶ್ರೀನಗರ- ಜಮ್ಮು, ಗುವಾಹಟಿ- ಅಗರ್ತಲಾ, ಅಗರ್ತಲಾ-ಗುವಾಹಟಿ ಮತ್ತು ಐಜ್ವಾಲ್ ಸೇರಿದಂತೆ ಇತರೆ ನಗರಗಳಿಗೆ ಈ ಆಫರ್ ಅನ್ವಯವಾಗಲಿದೆ.
ವಿಮಾನಯಾನ ಮಾಡುವ ಪ್ರಯಾಣಿಕರಿಗೆ ಲಕ್ಕಿ ಡ್ರಾ ಇದ್ದು, ದುಬೈ, ಕೊಲಂಬೊ ಮತ್ತು ಬ್ಯಾಂಕಾಕ್ ಮತ್ತು ಮಸ್ಕಟ್ ಗೆ ಹಾಲಿಡೇ ಪ್ಯಾಕೇಜ್ ಬಹುಮಾನ ಸಿಗಲಿದೆ.
ಜೂನ್ 28 ರಿಂದ ಆರಂಭವಾಗುವ ಈ ಆಫರ್ ಜುಲೈ-4 ರ ಮಧ್ಯರಾತ್ರಿಯಂದು ಕೊನೆಗೊಳ್ಳಲಿದೆ, ಜುಲೈ 14 ರಿಂದ ಮಾರ್ಚ್ 24 ರ ವರೆಗೆ ಸಂಚರಿಸುವ ಎಲ್ಲಾ ನಾನ್ ಸ್ಟಾಪ್ ದೇಶೀಯ ಸ್ಪೈಸ್ ಜೆಟ್ ವಿಮಾನ ಗಳಿಗೆ ಈ ದರ ಅನ್ವವಾಗಲಿದೆ.