ಮಾರ್ಚ್ 25 ರಿಂದ ಏಪ್ರಿಲ್ 1 ರವರೆಗೆ ಬ್ಯಾಂಕ್ ಗಳಿಗೆ ಯಾವುದೇ ರಜೆ ಇಲ್ಲ

ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್'ಗಳು ಶನಿವಾರ ಹಾಗೂ ಭಾನುವಾರ ಒಳಗೊಂಡಂತೆ 8 ದಿನಗಳ ಕಾಲ ಕಾರ್ಯ ನಿರ್ವಹಿಸಲಿವೆ ಎಂದು ಆರ್'ಬಿಐ ಪ್ರಕಟಣೆ...
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ನವದೆಹಲಿ:  ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್'ಗಳು ಇದೇ ಶನಿವಾರ ಹಾಗೂ ಭಾನುವಾರ ಒಳಗೊಂಡಂತೆ 8 ದಿನಗಳ ಕಾಲ ಕಾರ್ಯ ನಿರ್ವಹಿಸಲಿವೆ ಎಂದು ಆರ್'ಬಿಐ ಪ್ರಕಟಣೆ ತಿಳಿಸಿದೆ

ಸರ್ಕಾರದ ಸ್ವೀಕೃತಿ ಹಾಗೂ ತೆರಿಗೆ ಸಂಗ್ರಹದ ವಹಿವಾಟಿನ ಹಿನ್ನೆಲೆಯಲ್ಲಿ ಮಾ.25ರಿಂದ ಏಪ್ರಿಲ್ 1ರವರೆಗೆ ತೆರೆದಿರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ನೀಡಿದೆ. ಈ ಅವಧಿಯಲ್ಲಿ ಆರ್ ಬಿಐ ಕೂಡಾ ಕಾರ್ಯನಿರ್ವಹಿಸಲಿದೆ ಎಂದು ಹೇಳಿದೆ.

ಸರ್ಕಾರಿ ಸ್ವೀಕೃತಿ ಮತ್ತು ಪಾವತಿ ಸಂಗ್ರಹದ ವಹಿವಾಟಿನ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳ 4ನೇ ಹಾಗೂ ಭಾನುವಾರ, ಎಲ್ಲಾ ರಜೆ ಸೇರಿದಂತೆ) ಮಾ.25ರಿಂದ ಏ.1ರವರೆಗೆ ಬ್ಯಾಂಕ್ ಗಳು ಕಾರ್ಯನಿರ್ವಹಿಸಬೇಕೆಂದು ಆರ್ ಬಿಐ ಶುಕ್ರವಾರ ಸಂಜೆ ವೆಬ್ ಸೈಟ್ ನಲ್ಲಿ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಆರ್ ಬಿಐ ಸೂಚನೆಯಂತೆ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್ ಗಳು ರಜಾ ದಿನಗಳು ಸೇರಿದಂತೆ ಮಾರ್ಚ್ 25ರಿಂದ ಏ.1ರವರೆಗೆ 8 ದಿನಗಳ ಕಾಲ ಕಾರ್ಯನಿರ್ವಹಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com