10 ಸಾವಿರ ಅಮೆರಿಕನ್ನರಿಗೆ ಉದ್ಯೋಗ ನೀಡಲು ಇನ್ಫೋಸಿಸ್ ಮುಂದು

ಸ್ಥಳೀಯರಿಗೆ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ಮುಂದಿನ ಎರಡು ವರ್ಷಗಳಲ್ಲಿ 10,000 ಅಮೆರಿಕನ್ನರನ್ನು ನೇಮಕ ಮಾಡಿಕೊಳ್ಳುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸಾನ್ ಫ್ರಾನ್ಸಿಸ್ಕೊ: ಸ್ಥಳೀಯರಿಗೆ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ಮುಂದಿನ ಎರಡು ವರ್ಷಗಳಲ್ಲಿ 10,000 ಅಮೆರಿಕನ್ನರನ್ನು ನೇಮಕ ಮಾಡಿಕೊಳ್ಳುವ ಯೋಜನೆಯಿದೆ ಎಂದು ಇನ್ಪೋಸಿಸ್ ಸಂಸ್ಥೆ ಮಂಗಳವಾರ ಪ್ರಕಟಿಸಿದೆ. 
 ಈ ಕುರಿತು ಅಮೆರಿಕಾದ ಇಂಡಿಯಾನಾ ರಾಜ್ಯದಿಂದ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕಂಪೆನಿ, ಅಮೆರಿಕದಾದ್ಯಂತ 4 ಹೊಸ ತಾಂತ್ರಿಕ ಮತ್ತು ಸಂಶೋಧನಾ ಕೇಂದ್ರಗಳನ್ನು ತೆರೆಯಲಾಗುವುದು. ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಆರ್ಟ್ ಫಿಶಿಯಲ್ ಇಂಟೆಲಿಜೆನ್ಸ್, ಯಂತ್ರ ಕಲಿಕೆ, ಬಳಕೆದಾರ ಅನುಭವ, ಡಿಜಿಟಲ್ ತಂತ್ರಜ್ಞಾನ, ಮೋಡ ಮತ್ತು ದೊಡ್ಡ ದೊಡ್ಡ ದಾಖಲೆಗಳ ಕುರಿತು ನಾವೀನ್ಯತೆ, ಅಭಿವೃದ್ಧಿ ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದೆ.
ಹಣಕಾಸು ಸೇವೆ, ಉತ್ಪಾದನೆ, ಆರೋಗ್ಯಸೇವೆ, ಚಿಲ್ಲರೆ, ಇಂಧನ ಮತ್ತು ಇನ್ನೂ ಹಲವು ಕ್ಷೇತ್ರಗಳಲ್ಲಿ ಗ್ರಾಹಕರಿಗೆ ಇದು ನೆರವು ನೀಡಲಿದೆ.
ಮೊದಲ ಘಟಕ ಮುಂದಿನ ಆಗಸ್ಟ್ ನಲ್ಲಿ ಇಂಡಿಯಾನಾದಲ್ಲಿ ತೆರೆಯುವ ನಿರೀಕ್ಷೆಯಿದೆ. ಇಲ್ಲಿ 2021ರ ವೇಳೆಗೆ 2,000 ಅಮೆರಿಕನ್ನರಿಗೆ ಉದ್ಯೋಗ ದೊರಕಿಸಿಕೊಡುವ ನಿರೀಕ್ಷೆಯಿದೆ. ಇದರಿಂದ ಇಂಡಿಯಾನಾದ ಆರ್ಥಿಕತೆ ಹೆಚ್ಚಾಗಲಿದೆ ಎಂದಿದೆ.
ಅಮೆರಿಕಾದಲ್ಲಿ ತನ್ನ ಗ್ರಾಹಕರಿಗೆ ಡಿಜಿಟಲ್ ಭವಿಷ್ಯವನ್ನು ಕಂಡುಹಿಡಿದು ಪರಿಚಯಿಸಲು ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕನ್ನರನ್ನೇ ನೇಮಕ ಮಾಡಿಕೊಳ್ಳುವ ಉದ್ದೇಶವಿದೆ ಎಂದು ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ವಿಶಾಲ್ ಸಿಕ್ಕಾ ತಿಳಿಸಿದ್ದಾರೆ.
ಅಮೆರಿಕಾದ ನೌಕರರಿಗೆ ಮೂಲಭೂತ ಮತ್ತು ಬೃಹತ್ ರೀತಿಯಲ್ಲಿ ನಾವೀನ್ಯತೆ ಮತ್ತು ಶಿಕ್ಷಣ ನೀಡಲು ನಮಗೆ ಉತ್ಸುಕವಾಗುತ್ತಿದೆ. ತಂತ್ರಜ್ಞಾನದಲ್ಲಿ ಅತ್ಯಾಧುನಿಕತೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಮ್ಮ ಜಗತ್ತನ್ನು ಆಮೂಲಾಗ್ರವಾಗಿ ರೂಪಾಂತರಗೊಳಿಸಲಿದ್ದು ಈ ಹೊಸ ತಂತ್ರಜ್ಞಾನ ಕಲಿಕೆ ನಮ್ಮ ಕೈಗೆಟಕುವ ಅಂತರದಲ್ಲಿ ಇರುತ್ತದೆ. ಈ ತಂತ್ರಜ್ಞಾನವನ್ನು ಆಧರಿಸಿ ನಮ್ಮ ಗ್ರಾಹಕರಿಗೆ ಎಲ್ಲಾ ಕೈಗಾರಿಕಾ ವಲಯಗಳಲ್ಲಿ ನಾವೀನ್ಯಗಾರರು ಮತ್ತು ಉದ್ಯಮಿಗಳು ಪರಿಹಾರ ಕಂಡುಹಿಡಿಯುತ್ತಾರೆ ಎಂದು ಸಿಕ್ಕಾ ಹೇಳಿದ್ದಾರೆ. 
ಪೂರ್ವ ಯುರೋಪ್ ದೇಶವಾದ ಕ್ರೊಯೇಷಿಯಾದಲ್ಲಿ ಸ್ಥಳೀಯರಿಗೆ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ವಿತರಣಾ ಕೇಂದ್ರವನ್ನು ಆರಂಭಿಸುವುದಾಗಿ ಇನ್ಫೋಸಿಸ್ ಕಂಪೆನಿ ಕಳೆದ ವಾರ ಘೋಷಿಸಿತ್ತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ಹೆಚ್-1ಬಿ ವೀಸಾ ನಿಯಮದ ಪರಿಣಾಮವಿದು ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com