ಭಾದ್ಲಾ ಸೌರ ವಿದ್ಯುತ್ ಪಾರ್ಕ್ ಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ದರ ನಿಗದಿ ಪಡಿಸಲಾಗಿದ್ದು, ಎನ್ ಟಿಪಿಸಿಯ ಕಲ್ಲಿದ್ದಲು ಆಧಾರಿತ ವಿದ್ಯುತ್ ದರ (ಯುನಿಟ್ ಗೆ 3.02 ರೂಪಾಯಿ) ಗಿಂತ ಕಡಿಮೆ ದರ ಇದಾಗಿದೆ. ಭಾದ್ಲಾದ 4ನೇ ಫೇಸ್ ಸೌರ ವಿದ್ಯುತ್ ಪಾರ್ಕ್ ಅತ್ಯಂತ ಕಡಿಮೆ ಸೌರ ವಿದ್ಯುತ್ ದರವನ್ನು ನಿಗದಿಪಡಿಸುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದು, 50 ಮೆಗಾವ್ಯಾಟ್ ನ ಫೆಲಾನ್ ಎನರ್ಜಿ ಹಾಗೂ 100 ಮೆಗಾ ವ್ಯಾಟ್ ನ ಅವಾಡಾ ಪವರ್ ಸೌರ ವಿದ್ಯುತ್ ಉತ್ಪಾದನೆಯ ಯೋಜನೆಯನ್ನು ಪ್ರತಿ ಯುನಿಟ್ ಗೆ 2.62 ರೂಪಾಯಿಗಳಿಗೆ ಪಡೆದಿದ್ದು ಸಾಫ್ಟ್ ಬ್ಯಾಂಕ್ ಕ್ಲೀನ್ ಟೆಕ್ 100 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಯೋಜನೆಯನ್ನು ಪ್ರತಿ ಯುನಿಟ್ ಗೆ 2.63 ರೂಪಾಯಿಯಂತೆ ಪಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.