ವಾಣಿಜ್ಯ

400 ಬೇನಾಮಿ ಡೀಲ್, 600 ಕೋಟಿ ರೂ. ಆಸ್ತಿಯನ್ನು ಪತ್ತೆ ಮಾಡಿದ ಐಟಿ ಇಲಾಖೆ

400 ಬೇನಾಮಿ ಡೀಲ್, 600 ಕೋಟಿ ರೂ. ಆಸ್ತಿಯನ್ನು ಪತ್ತೆ ಮಾಡಿದ ಐಟಿ ಇಲಾಖೆ
ಆದಾಯ ತೆರಿಗೆ ಇಲಾಖೆ
Published On :
ನವದೆಹಲಿ: ಕಳೆದ ವಾರ ದೇಶಾದ್ಯಂತ ಬೆನಾಮಿ ನಿಷೇಧ ಘಟಕಗಳ(ಬಿಪಿಯು) ಗಳನ್ನು ಸ್ಥಾಪನೆ ಮಾಡಿರುವ ಆದಾಯ ತೆರಿಗೆ ಇಲಾಖೆ 240 ಪ್ರಕರಣಗಳಲ್ಲಿ ಒಟ್ಟು 600 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಾಗೂ 400 ಬೇನಾಮಿ ಡೀಲ್ ಗಳನ್ನು ಪತ್ತೆ ಮಾಡಿರುವುದಾಗಿ ಹೇಳಿದೆ. 
ಹೊಸ ಬೇನಾಮಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಿದ್ಧತೆ ನಡೆಸಿರುವ ಐಟಿ ಇಲಾಖೆ ಕಾಯ್ದೆ ಜಾರಿಗೆ ಪೂರಕವಾದ ದಿಕ್ಕಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಬ್ಯಾಂಕ್ ಖಾತೆಯ ಠೇವಣಿ, ಭೂಮಿ ಖರೀದಿ, ಫ್ಲಾಟ್ ಖರೀದಿ, ಚಿನ್ನಾಭರಣ ಖರೀದಿ ಸೇರಿದಂತೆ ಮೇ.23 ರ ವರೆಗೂ ನಡೆದಿರುವ 400 ಬೇನಾಮಿ ವಹಿವಾಟುಗಳನ್ನು ಪತ್ತೆ ಮಾಡಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. 
240 ಪ್ರಕರಣಗಳಲ್ಲಿ ಪತ್ತೆಯಾದ ಆಸ್ತಿಯ ಮೌಲ್ಯ 600 ಕೋಟಿ ರೂಪಾಯಿಯಷ್ಟಿದ್ದು, ಕೋಲ್ಕತ್ತಾ, ಮುಂಬೈ, ದೆಹಲಿ, ಗುಜರಾತ್, ರಾಜಸ್ತಾನ ಹಾಗೂ ಮಧ್ಯಪ್ರದೇಶಗಳಲ್ಲಿ 40 ಪ್ರಕರಣಗಳಲ್ಲಿ ಪತ್ತೆಯಾದ ಸ್ಥಿರಾಸ್ತಿಯ ಮೌಲ್ಯ 530 ಕೋಟಿಯಷ್ಟಾಗಿದೆ ಎಂದು ಐಟಿ ಇಲಾಖೆ ಹೇಳಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.