ರಿಲಯನ್ಸ್ ಜಿಯೊ ದೀಪಾವಳಿ ಕೊಡುಗೆ: 399 ರಿಚಾರ್ಜ್ ಗೆ 100 ಶೇ. ಕ್ಯಾಶ್ ಬ್ಯಾಕ್

ಇದು ರಿಲಯನ್ಸ್ ಜಿಯೋ ಗ್ರಾಹಕರಿಗೆ ನೀಡುತ್ತಿರುವ ದೀಪಾವಳಿ ಕೊಡುಗೆ! ಜಿಯೋ ಧನ್ ಧನಾ ಧನ್ ಪ್ಲ್ಯಾನ್ ಅಡಿಯಲ್ಲಿ ರೂ. 399 ನೀವು ರಿಚಾರ್ಚ್ ಮಾಡಿಸಿಕೊಂಡರೆ...
ಜಿಯೊ 399 ರಿಚಾರ್ಜ್ ಗೆ 100 ಶೇ. ಕ್ಯಾಶ್ಬ್ಯಾಕ್
ಜಿಯೊ 399 ರಿಚಾರ್ಜ್ ಗೆ 100 ಶೇ. ಕ್ಯಾಶ್ಬ್ಯಾಕ್
Updated on: 
ನವದೆಹಲಿ: ಇದು ರಿಲಯನ್ಸ್  ಜಿಯೋ ಗ್ರಾಹಕರಿಗೆ ನೀಡುತ್ತಿರುವ ದೀಪಾವಳಿ ಕೊಡುಗೆ! ಜಿಯೋ ಧನ್ ಧನಾ ಧನ್ ಪ್ಲ್ಯಾನ್ ಅಡಿಯಲ್ಲಿ ರೂ. 399 ನೀವು ರಿಚಾರ್ಚ್ ಮಾಡಿಸಿಕೊಂಡರೆ ಶೇ.100ರಷ್ಟು ಕ್ಯಾಶ್‌ ಬ್ಯಾಕ್ ಪಡೆಯಲಿದ್ದೀರಿ.
ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ತನ್ನ 10 ಲಕ್ಷ ಗ್ರಾಹಕರಿಗೆ ಈ ಕೊಡುಗೆ ನೀಡುತ್ತಿದ್ದು ಯೋಜನೆ ಅ.12 ರಿಂದ 18ರ ವರೆಗೆ ಲಭ್ಯವಿದೆ. ಈ ಯೋಜನೆ ಸೇರ ಬಯಸುವವರು ಆನ್ ಲೈನ್ ಇಲ್ಲವೇ ಆಫ್ ಲೈನ್ ಮೂಲಕ ರಿಚಾರ್ಜ್ ಮಾಡಿಸಿಕೊಳ್ಳಬಹುದು.
ಗ್ರಾಹಕರು 399 ರೂ. ರಿಚಾರ್ಜ್ ಮಾಡಿಸಿದಾಗ ಅವರಿಗೆ 50 ರೂ. ಮೌಲ್ಯದ 8 ವೋಚರ್‌ಗಳನ್ನು ನೀಡಲಾಗುತ್ತದೆ. ಭವಿಷ್ಯದಲ್ಲಿ 91, 309 ರೂ. ಅಥವಾ ಹೆಚ್ಚಿನ ಮೌಲ್ಯದ ರಿಚಾರ್ಜ್ ಮಾಡಿಸಿದಿರೆ, ಈ ಗಿಫ್ಟ್‌ ವೋಚರ್‌ಗಳನ್ನು ಬಳಸಿಕೊಳ್ಳಬಹುದು. 
ಆದರೆ, ಈ ವೋಚರ್‌ ನ ಲಾಭವನ್ನು ಗ್ರಾಹಕರು ನ.15ರ ನಂತರ ಮಾತ್ರ ಪಡೆಯಬಹುದಾಗಿದ್ದು. ವೋಚರ್‌ಗಳಿಗೆ ಯಾವುದೇ ಅಂತಿಮ ಗಡುವು ಇರುವುದಿಲ್ಲ. ಇದರಿಂದಾಗಿ ಗ್ರಾಹಕರು ಯಾವ ಸಮಯದಲ್ಲಿಯೂ  ಈ ವೋಚರ್ ನ ಲಾಭ ಪಡೆದುಕೊಳ್ಳಲು ಸಾಧ್ಯವಿದೆ ಎಂದು ರಿಲಯನ್ಸ್ ಸಂಸ್ಥೆ ಮೂಲಗಳು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com