ಕರ್ನಾಟಕದಲ್ಲಿ ಕರಾವಳಿ ಸವಕಳಿ ತಡೆಗೆ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನಿಂದ 65.5 ಮಿಲಿಯನ್ ಡಾಲರ್ ನೆರವು

ಕರ್ನಾಟಕದಲ್ಲಿ ಕರಾವಳಿ ಸವಕಳಿಯನ್ನು ತಡೆಗಟ್ಟುವುದಕ್ಕಾಗಿ ಕ್ರಮ ಕೈಗೊಳ್ಳಲು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಏಷ್ಯನ್ ಬ್ಯಾಂಕ್ 65.5 ಮಿಲಿಯನ್ ಡಾಲರ್ ಮೊತ್ತದ ನೆರವು ನೀಡಲು ಮುಂದಾಗಿದೆ.
ಏಷ್ಯನ್ ಅಭಿವೃದ್ಧಿ ಬ್ಯಾಂಕ್
ಏಷ್ಯನ್ ಅಭಿವೃದ್ಧಿ ಬ್ಯಾಂಕ್
ನವದೆಹಲಿ: ಕರ್ನಾಟಕದಲ್ಲಿ ಕರಾವಳಿ ಸವಕಳಿಯನ್ನು ತಡೆಗಟ್ಟುವುದಕ್ಕಾಗಿ ಕ್ರಮ ಕೈಗೊಳ್ಳಲು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಏಷ್ಯನ್ ಬ್ಯಾಂಕ್ 65.5 ಮಿಲಿಯನ್ ಡಾಲರ್ ಮೊತ್ತದ ನೆರವು ನೀಡಲು ಮುಂದಾಗಿದೆ. 
ಕೋಸ್ಟಲ್ ಪ್ರೊಟೆಕ್ಷನ್ ಹಾಗೂ ಮ್ಯಾನೇಜ್ಮೆಂಟ್ ಇನ್ವೆಸ್ಟ್ಮೆಂಟ್ ಪ್ರೋಗ್ರಾಮ್ ಗಾಗಿ ಮಂಜೂರು ಮಾಡಲಾಗುವ 250 ಮಿಲಿಯನ್ ಡಾಲರ್ ನ 2 ನೇ ಕಂತು ಇದಾಗಿದೆ ಎಂದು ಎಡಿಬಿ ಹೇಳಿಕೆ ನೀಡಿದೆ. ಕರಾವಳಿ ಪ್ರದೇಶದ ರಕ್ಷಣೆಗೆ ಅಗತ್ಯವಿರುವ ಕ್ರಮಗಳಿಗೆ ಆರ್ಥಿಕ ನೆರವು ಸಿಗಲಿದ್ದು ಕರ್ನಾಟಕದ ಲೋಕೋಪಯೋಗಿ, ಬಂದರು ಹಾಗೂ ಜಲಸಾರಿಗೆ ಇಲಾಖೆಯ ಸಾಂಸ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗಲಿದೆ.  ಎಡಿಬಿಯ ಪ್ರಾದೇಶಿಕ ನಿರ್ದೇಶಕ ಕೆನಿಚಿ ಯೋಕೋಯಾಮಾ, ಹಾಗೂ ಬಹುಪಕ್ಷೀಯ ಸಂಸ್ಥೆಗಳ ಜಂಟಿ ನಿರ್ದೇಶಕ ಸಮೀರ್ ಕುಮಾರ್ ಖರೆ ಅವರು ಒಪ್ಪಂದಕ್ಕೆ ಸಹಿಹಾಕಿದ್ದಾರೆ. 
ಹವಾಮಾನ ಬದಲಾವಣೆಯ ಪರಿಣಾಮದಿಂದ ಕರಾವಳಿ ರಕ್ಷಣೆ ಹಾಗೂ ನಿರ್ವಹಣೆ ಅಭಿವೃದ್ಧಿಗೆ ಪ್ರಮುಖ ಸವಾಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com