6 ಮಿಲಿಯನ್ ತಲುಪಿದ ಜಿಯೋ ಫೋನ್ ಬುಕ್ಕಿಂಗ್, ರಿಲಯನ್ಸ್ ನಿಂದ ಹೊಸ ದಾಖಲೆ

ಅಗ್ಗದ ದರದಲ್ಲಿ ಇಂಟರ್ನೆಟ್ ಸೇವೆ ಒದಗಿಸಿ ಟೆಲಿಕಾಂ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ರಿಲಯನ್ಸ್ ಜಿಯೋ ಇದೀಗ ಮೊಬೈಲ್ ಫೋನ್ ಮಾರಾಟದಲ್ಲೂ ಹೊಸ ದಾಖಲೆ ಬರೆದಿದೆ.
ಜಿಯೋ ಮೊಬೈಲ್ ಫೋನ್
ಜಿಯೋ ಮೊಬೈಲ್ ಫೋನ್
Updated on: 
ಹೊಸದಿಲ್ಲಿ: ಅಗ್ಗದ ದರದಲ್ಲಿ ಇಂಟರ್ನೆಟ್ ಸೇವೆ ಒದಗಿಸಿ ಟೆಲಿಕಾಂ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ರಿಲಯನ್ಸ್ ಜಿಯೋ ಇದೀಗ ಮೊಬೈಲ್ ಫೋನ್ ಮಾರಾಟದಲ್ಲೂ ಹೊಸ ದಾಖಲೆ ಬರೆದಿದೆ.
ರಿಲಯನ್ಸ್ ಜಿಯೋ ಇತ್ತಿಚೆಗೆ ಮಾರುಅಕಟ್ಟೆಗೆ ಪರಿಚಯಿಸಿದ ಉಚಿತ 4ಜಿ ಜಿಯೋ ಫೋನ್ ಗಳಿಗೆ ದೇಶದೆಲ್ಲೆಡೆ ವ್ಯಾಪಕ ಬೇಡಿಕೆ ಬಂದಿದೆ, ಮೊದಲ ದಿನವೇ 60 ಲಕ್ಷ ಮೊಬೈಲ್ ಫೋನ್ ಬುಕ್ ಆಗಿವೆ ಎಂದು ಸಂಸ್ಥೆ ತಿಳಿಸಿದೆ.
ಗ್ರಾಹಕರಿಗೆ ಫೋನ್‌ ಗಳ ವಿತರಣೆಯನ್ನು ಸೆಪ್ಟೆಂಬರ್ 21ರಿಂದ ಪ್ರಾರಂಭಿಸಲಾಗುವುಉದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. 
500 ರೂ. ಮುಂಗಡ ಹಣ ನೀಡಿ ಫೋನ್ ಬುಕ್ ಮಾಡಲು ಆ.24ರಿಂದ ಅವಕಾಶ ಕಲ್ಪಿಸಲಾಗಿತ್ತು. ಫೋನ್ ಪಡೆದ ಬಳಿಕ ಗ್ರಾಹಕರು 1000 ರು. ಪಾವತಿಸಬೇಕು. 3 ವರ್ಷದ ಬಳಿಕ ಗ್ರಾಹಕರಿಗೆ ಸಂಸ್ಥೆ ಎಲ್ಲಾ ಹಣವನ್ನು ಮರು ಪಾವತಿ ಮಾಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com