ದೀಪಾವಳಿ ವೇಳೆಗೆ ಏರ್ ಟೆಲ್ 4 ಜಿ ಸ್ಮಾರ್ಟ್ ಫೋನ್ ಬಿಡುಗಡೆ ಸಾಧ್ಯತೆ

ಭಾರತದ ಅತಿ ದೊಡ್ಡ ಟೆಲಿಕಾಮ್ ಆಪರೇಟರ್ ಭಾರತಿ ಏರ್ ಟೆಲ್ ಸಂಸ್ಥೆ ರಿಲಾಯನ್ಸ್ ಜಿಯೋಗೆ ಪೈಪೋಟಿ ನೀಡಲು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಏರ್ ಟೆಲ್ ನ 4 ಜಿ ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡಲು...
ಏರ್ ಟೆಲ್
ಏರ್ ಟೆಲ್
ನವದೆಹಲಿ: ಭಾರತದ ಅತಿ ದೊಡ್ಡ ಟೆಲಿಕಾಮ್ ಆಪರೇಟರ್ ಭಾರತಿ ಏರ್ ಟೆಲ್ ಸಂಸ್ಥೆ ರಿಲಾಯನ್ಸ್ ಜಿಯೋಗೆ ಪೈಪೋಟಿ ನೀಡಲು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಏರ್ ಟೆಲ್ ನ 4 ಜಿ ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. 
4 ಜಿ ಸ್ಮಾರ್ಟ್ ಫೋನ್ ಗಾಗಿ ಹ್ಯಾಂಡ್ ಸೆಟ್ ತಯಾರಕ ಸಂಸ್ಥೆಗಳೊಂದಿಗೆ ಏರ್ ಟೆಲ್ ಮಾತುಕತೆ ನಡೆಸಿದ್ದು, ದೀಪಾವಳಿ ವೇಳೆಗೆ ಏರ್ ಟೆಲ್ ಸ್ಮಾರ್ಟ್ ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು. ಏರ್ ಟೆಲ್ ಸ್ಮಾರ್ಟ್ ಫೋನ್ ನ ಬೆಲೆ 2,500-2,700 ರೂಗಳಷ್ಟಿರಲಿದ್ದು ರಿಲಾಯನ್ಸ್ ಜಿಯೋಗೆ ಪೈಪೋಟಿ ನೀಡುವ ಉದ್ದೇಶ ಹೊಂದಿದೆ. 
4 ಜಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ ನಂತರ ಏರ್ ಟೆಲ್ ಆಕರ್ಷಕ 4 ಜಿ ಡಾಟಾ ಯೋಜನೆಯನ್ನು ಘೋಷಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 4 ಇಂಚಿನ ಪರದೆ 1 ಜಿಬಿ ರ‍್ಯಾಮ್, ಆಂಡ್ರಾಯ್ಡ್ ಒಎಸ್ ನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com