ಈ ವರ್ಷದ ಜೂನ್ ನಿಂದ ಪೆಟ್ರೋಲ್ ದರಗಳು ಪ್ರತಿನಿತ್ಯ ಬದಲಾವಣೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಳಿತಕ್ಕೆ ಅನುಗುಣವಾಗಿ ಪ್ರತಿದಿನವೂ ಪೆಟ್ರೋಲ್ ದರ ಪರಿಷ್ಕೃತವಾಗುತ್ತಿದೆ. ಹೆಚ್ಚಿನ ಪರಿಷ್ಕೃತ ದರವನ್ನು ಗ್ರಾಹಕರ ಮೇಲೆ ಹೇರದೇ ಪೆಟ್ರೋಲಿಯಮ್ ಮಾರುಕಟ್ಟೆ ಸಂಸ್ಥೆಗಳೇ ಭರಿಸಲಿವೆ ಎಂದು ಪೆಟ್ರೋಲಿಯಂ ಡಿಲರ್ಸ್ ಅಸೋಸಿಯೇಷನ್ ನ ಸದಸ್ಯರೊಬ್ಬರು ತಿಳಿಸಿದ್ದಾರೆ.