ವಾಣಿಜ್ಯ

ಡೋರ್ ಮ್ಯಾಟ್, ಟಾಯ್ಲೆಟ್ ಸೀಟ್ ಮೇಲೆ ಗೋಲ್ಡನ್ ಟೆಂಪಲ್ ಚಿತ್ರ, ಮತ್ತೆ ವಿವಾದಕ್ಕಿಡಾದ ಅಮೆಜಾನ್

ಇ-ಕಾಮರ್ಸ್ ಸಂಸ್ಥೆ ಅಮೆಜಾನ್, ಗೋಲ್ಡನ್ ಟೆಂಪಲ್ ಚಿತ್ರವಿರುವ ಡೋರ್ ಮ್ಯಾಟ್, ರಗ್ಗುಗಳು ಹಾಗೂ ಟಾಯ್ಲೆಟ್ ಸೀಟ್ ಗಳನ್ನು ಆನ್ ಲೈನ್ ನಲ್ಲಿ ಮಾರಾಟಕ್ಕಿಟ್ಟಿದ್ದು, ಸಿಖ್ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದೆ.

ಡೋರ್ ಮ್ಯಾಟ್, ಟಾಯ್ಲೆಟ್ ಸೀಟ್ ಮೇಲೆ ಗೋಲ್ಡನ್ ಟೆಂಪಲ್ ಚಿತ್ರ, ಮತ್ತೆ ವಿವಾದಕ್ಕಿಡಾದ ಅಮೆಜಾನ್
ಟಾಯ್ಲೆಟ್ ಸೀಟ್ ಮೇಲೆ ಗೋಲ್ಡನ್ ಟೆಂಪಲ್ ಚಿತ್ರ
Published On :

ನವದೆಹಲಿ:ಇ-ಕಾಮರ್ಸ್ ಸಂಸ್ಥೆ ಅಮೆಜಾನ್, ಗೋಲ್ಡನ್ ಟೆಂಪಲ್ ಚಿತ್ರವಿರುವ ಡೋರ್ ಮ್ಯಾಟ್, ರಗ್ಗುಗಳು ಹಾಗೂ ಟಾಯ್ಲೆಟ್ ಸೀಟ್ ಗಳನ್ನು ಆನ್ ಲೈನ್ ನಲ್ಲಿ ಮಾರಾಟಕ್ಕಿಟ್ಟಿದ್ದು, ಸಿಖ್ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದೆ. 

ಈ ಹಿಂದೆ ಡೋರ್ ಮ್ಯಾಟ್ ಗಳ ಮೇಲೆ ಭಾರತದ ರಾಷ್ಟ್ರಧ್ವಜ ಹಾಗೂ ಮಹಾತ್ಮಾಗಾಂಧಿ ಚಿತ್ರವಿರುವ ಚಪ್ಪಲಿಯನ್ನು ಮಾರಾಟಕ್ಕಿಟ್ಟು ಛೀಮಾರಿ ಹಾಕಿಸಿಕೊಂಡಿದ್ದ ಅಮೆಜಾನ್ ಈಗ ಮತ್ತೆ ಗೋಲ್ಡನ್ ಟೆಂಪ್ ಚಿತ್ರವಿರುವ ಡೋರ್ ಮ್ಯಾಟ್, ರಗ್ಗುಗಳು ಹಾಗೂ ಟಾಯ್ಲೆಟ್ ಸೀಟ್ ಅನ್ನು ಮಾರಾಟಕ್ಕಿಟ್ಟಿದೆ. 
ಅಮೆಜಾನ್, ಐತಿಹಾಸಿಕ ಪವಿತ್ರ ಗೋಲ್ಡನ್ ಟೆಂಪ್ ಚಿತ್ರವಿರುವ ಡೋರ್ ಮ್ಯಾಟ್, ರಗ್ಗುಗಳು ಹಾಗೂ ಟಾಯ್ಲೆಟ್ ಸೀಟ್ ಅನ್ನು ಮಾರಾಟಕ್ಕಿಟ್ಟಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅದನ್ನು ಕೂಡಲೇ ತೆಗೆದು ಹಾಕಬೇಕು ಎಂದು ಸಿಖ್ ಒಕ್ಕೂಟದ ಹಿರಿಯ ವ್ಯವಸ್ಥಾಪಕ ಸಿಮ್ ಸಿಂಗ್ ಅವರು ಅಮೆಜಾನ್ ಸಿಇಒಗೆ ಪತ್ರ ಬರೆದಿದ್ದಾರೆ.
ಸಿಖ್ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಮೆಜಾನ್, ಕ್ಷಮಿಸಿ, ಆ ಉತ್ಪನ್ನಗಳನ್ನು ಹುಡುಕಲು ನಮಗೆ ಸಾಧ್ಯವಾಗುತ್ತಿಲ್ಲ. ವೆಬ್ ಸೈಟ್ ನಿಂದ ಆ ಉತ್ಪನ್ನಗಳನ್ನು ಈಗಾಗಲೇ ತೆಗೆದುಹಾಕಿರುವ ಸಾಧ್ಯತೆ ಇದೆ ಎಂದು ಸಿಂಗ್ ಪತ್ರಕ್ಕೆ ಉತ್ತರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.