ಒಂದೇ ದಿನ 611 ಅಂಕ ಏರಿಕೆ ಕಂಡ ಸೆನ್ಸೆಕ್ಸ್, ಜುಲೈ ತಿಂಗಳ ಬಳಿಕ ಗರಿಷ್ಠ ಸಾಧನೆ

ಸೋಮವಾರ ಒಂದೇ ದಿನ ಸೆನ್ಸೆಕ್ಸ್ 611 ಅಂಕಗಳ ಏರಿಕೆ ಕಂಡಿದ್ದು, ಇದು ಕಳೆದ ಜುಲೈ ತಿಂಗಳ ಬಳಿಕ ಭಾರತೀಯ ಷೇರುಮಾರುಕಟ್ಟೆ ಗಳಿಸಿದ ಒಂದು ದಿನದ ಗರಿಷ್ಠ ಸಾಧನೆಯಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಸೋಮವಾರ ಒಂದೇ ದಿನ ಸೆನ್ಸೆಕ್ಸ್ 611 ಅಂಕಗಳ ಏರಿಕೆ ಕಂಡಿದ್ದು, ಇದು ಕಳೆದ ಜುಲೈ ತಿಂಗಳ ಬಳಿಕ ಭಾರತೀಯ ಷೇರುಮಾರುಕಟ್ಟೆ ಗಳಿಸಿದ ಒಂದು ದಿನದ ಗರಿಷ್ಠ ಸಾಧನೆಯಾಗಿದೆ ಎಂದು ತಿಳಿದುಬಂದಿದೆ.
ಅಮೆರಿಕದ ಆರ್ಥಿಕತೆಯಲ್ಲಿ ಕಂಡುಬಂದಿರುವ ಚೇತರಿಕೆಯ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಉತ್ಸಾಹ ಉಂಟುಮಾಡಿದ್ದು ಪರಿಣಾಮ ಭಾರತೀಯ ಶೇರುಪೇಟೆಯ ಮೇಲೂ ಬಿದ್ದಿದೆ. ಸೋಮವಾರಂದು ಬಿಎಸ್‌ಇ ಸೆನ್ಸೆಕ್ಸ್ 611 ಅಂಕಗಳ ಏರಿಕೆ ಕಂಡು 33,917.94ಕ್ಕೆ ತಲುಪಿದೆ. ಈ ಮಟ್ಟದ ಏರಿಕೆ ಮಾರ್ಚ್ 2016ರ ನಂತರ ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ ಗರಿಷ್ಠ ಸಾಧನೆ ಮಾಡಿದೆ ಎಂದು ತಜ್ಞರು ತಿಳಿಸಿದ್ದಾರೆ.
ಪ್ರಮುಖವಾಗಿ ವಿದೇಶಿ ಬಂಡವಾಳ ಭಾರತೀಯ ಮಾರುಕಟ್ಟೆಗೆ ಧಾರಾಳವಾಗಿ ಬರುತ್ತಿರುವುದು ಮತ್ತು ಹಣದುಬ್ಬರ ಮತ್ತು ಕೈಗಾರಿಕಾ ಅಂಕಿಅಂಶಗಳು ಉತ್ತಮವಾಗಿರುವುದು ಷೇರುಪೇಟೆಯ ಚೇತೋಹಾರಿ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.  ಅಂತೆಯೇ ನಿಫ್ಟಿ ಕೂಡಾ 194.55 ಅಂಕ ಏರಿಕೆ ಕಂಡು 10,421.40 ಅಂಕಗಳಿಗೆ ಏರಿಕೆಯಾಗಿದೆ.  
ದಿನದ ವಹಿವಾಟಿನಲ್ಲಿ ನಿಫ್ಟಿ 10,433.65 ಅಂಕ ತಲುಪಿತ್ತು. ಹೂಡಿಕೆದಾರರು ಖರೀದಿಗೆ ಮುಂದಾದ ಕಾರಣ ಈ ರೀತಿಯ ಏರಿಕೆ ಕಂಡುಬಂದಿದೆ. ಅಮೆರಿಕದ ಉದ್ಯೋಗ ವರದಿಯು ಗುಣಾತ್ಮಕವಾಗಿರುವುದು ಕೂಡಾ ಈ ಜಿಗಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com