ವಾಣಿಜ್ಯ

ಸರ್ಕಾರ ಪೆಟ್ರೋಲ್ ದರವನ್ನು 25 ರೂ. ಕಡಿಮೆ ಮಾಡಬಹುದು, ಆದರೆ ಮಾಡುವುದಿಲ್ಲ: ಚಿದಂಬರಂ

ಸರ್ಕಾರ ಪೆಟ್ರೋಲ್ ದರವನ್ನು 25 ರೂ. ಕಡಿಮೆ ಮಾಡಬಹುದು, ಆದರೆ ಮಾಡುವುದಿಲ್ಲ: ಚಿದಂಬರಂ
ಚಿದಂಬರಂ
Published On :
ಬೆಂಗಳೂರು: ದೇಶಾದ್ಯಂತ ಪೆಟ್ರೋಲ್ ದರ ಏರಿಕೆಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದು, ಸರ್ಕಾರ ಪೆಟ್ರೋಲ್ ದರವನ್ನು 25 ರೂಪಾಯಿ ಕಡಿಮೆ ಮಾಡಬಹುದು ಎಂದು ಮಾಜಿ ಕೇಂದ್ರ ಸಚಿವ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ. 
ಪೆಟ್ರೋಲ್ ದರ ಏರಿಕೆ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಕೇಂದ್ರ ಸಚಿವ ಚಿದಂಬರಂ, ಸರ್ಕಾರ ಪೆಟ್ರೋಲ್ ದರವನ್ನು 25 ರೂಪಾಯಿ ಕಡಿಮೆ ಮಾಡಬಹುದು ಆದರೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪ್ರತಿ ಲೀಟರ್ ಪೆಟ್ರೋಲ್ ಗೆ ತೆರಿಗೆಯೂ ಸೇರಿ ಒಟ್ಟು 25 ರೂಪಾಯಿ ಉಳಿತಾಯವಾಗುತ್ತದೆ. ಇದು ಸಾಮಾನ್ಯ ಜನಕ್ಕೆ ಸೇರಬೇಕಾದ ಹಣ ಆದರೆ ಕೇಂದ್ರ ಸರ್ಕಾರ ದರ ಕಡಿಮೆ ಮಾಡುವುದಿಲ್ಲ ಕೇವಲ 1, 2 ರೂಪಾಯಿಗಳನ್ನು ಕಡಿಮೆ ಮಾಡಿ ಜನರಿಗೆ ಮೋಸ ಮಾಡುತ್ತದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ. 
ಪೆಟ್ರೋಲ್ ದರ ಪ್ರತಿ ಲೀಟರ್ ಗೆ 76.8 ರೂಪಾಯಿಗಳಿಗೆ ಏರಿಕೆಯಾಗಿದ್ದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.