ಇಂದು ಪೆಟ್ರೋಲ್ ದರಲ್ಲಿ 19 ಪೈಸೆಯಷ್ಟು ಇಳಿಕೆಯಾಗಿದ್ದು, ಡೀಸೆಲ್ ದರದಲ್ಲಿ 14 ಪೈಸೆಯಷ್ಟು ಇಳಿಕೆ ಕಂಡು ಬಂದಿದೆ. ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 79.18ರೂಗೆ ಇಳಿಕೆಯಾಗಿದ್ದು, ಡೀಸೆಲ್ ದರ 73.64ಕ್ಕೆ ಇಳಿಕೆಯಾಗಿದೆ. ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲೂ ಪೆಟ್ರೋಲ್ ದರದಲ್ಲಿ 18ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರ 84.68 ರೂಗಳಿಗೆ ಇಳಿಕೆಯಾಗಿದ್ದು, ಡೀಸೆಲ್ ದರ ಕೂಡ 14 ಪೈಸೆಯಷ್ಟು ಕಡಿಮೆಯಾಗಿ ಪ್ರತೀ ಲೀಟರ್ ಡೀಸೆಲ್ ದರ 77.18ಕ್ಕೆ ಇಳಿಕೆಯಾಗಿದೆ.