ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸತತವಾಗಿ ಕುಸಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಿದೆ.
ಪೆಟ್ರೋಲ್ ಲೀಟರ್ ಗೆ 20 ಪೈಸೆ ಹಾಗೂ ಡಿಸೇಲ್ ಲೀಟರ್ ಗೆ 19 ಪೈಸೆಯಷ್ಟು ಇಳಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 76.71 ರೂ.ಗೆ ಇಳಿಕೆಯಾಗಿದ್ದು, ಡೀಸೆಲ್ ಪ್ರತೀ ಲೀಟರ್‌ಗೆ 71.56 ರೂ.ಗಳಿಗೆ ಇಳಿಕೆಯಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಲೀ. ಪೆಟ್ರೋಲ್ 82.23 ರೂ.ಗಳಷ್ಟಿದ್ದು, ಇಂದು 20 ಪೈಸೆ ಕಡಿಮೆಯಾಗಿದೆ. ಅದರಂತೇ ಡೀಸೆಲ್‌ಗೆ 19 ಪೈಸೆ ಕಡಿಮೆಯಾಗಿದ್ದು, 75.97 ರೂ.ಗೆ ಮಾರಾಟವಾಗುತ್ತಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರು ಕೂಡ ಇಂಧನ ಬೆಲೆ ಇಳಿಕೆಗೆ ಸಾಕ್ಷಿಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ 77.32 ರೂ. ಮತ್ತು ಡೀಸೆಲ್ ಲೀ.ಗೆ 71.93 ರೂ.ಗೆ ಮಾರಾಟವಾಗುತ್ತಿದೆ.
ಕಳೆದ ಅಕ್ಟೋಬರ್ 16ರಂದು ಇಂಧನ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ಅದಾದ ಬಳಿಕ ಕಚ್ಚಾತೈಲ ಬೆಲೆಯಲ್ಲಿ ನಿರಂತರ ಇಳಿಕೆಯಾಗುತ್ತಿದೆ.