ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಅಡಿಯಲ್ಲಿ ಆದಾಯ ಸಂಗ್ರಹಣೆ ಚೇತರಿಸಿಕೊಂಡಿದ್ದು, ಸೆಪ್ಟೆಂಬರ್ ನಲ್ಲಿ 94,442 ಕೋಟಿ ರುಪಾಯಿ ಸಂಗ್ರಹಿಸಲಾಗಿದೆ.
ಇದಕ್ಕು ಮುನ್ನ ಆಗಸ್ಟ್ ತಿಂಗಳಲ್ಲಿ 93,690 ಕೋಟಿ ರುಪಾಯಿಗೆ ಆದಾಯ ಸಂಗ್ರಹಿಸಲಾಗಿತ್ತು. ಕಳೆದ ತಿಂಗಳು 94,442 ಕೋಟಿ ರುಪಾಯಿ ಆದಾಯ ಸಂಗ್ರಹಿಸಲಾಗಿದ್ದು, ಸೆಪ್ಟೆಂಬರ್ ನಲ್ಲಿ ಒಟ್ಟು 67 ಲಕ್ಷ ಜಿಎಸ್ ಟಿ ರಿಟರ್ನ್ಸ್ ಫೈಲ್ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ತಿಳಿಸಿದೆ.
ಕೇಂದ್ರ ಜಿಎಸ್ ಟಿ 15, 318 ಕೋಟಿ, ರಾಜ್ಯ ಜಿಎಸ್ ಟಿ 21,061 ಕೋಟಿ ಇಂಟಿಗ್ರೇಟೆಡ್ ಜಿಎಸ್ಟಿ 50,070 ಕೋಟಿ ಮತ್ತು ಸೆಸ್ 7,993 ಕೋಟಿ ರುಪಾಯಿ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಸೆಪ್ಟೆಂಬರ್ ನಲ್ಲಿ ಒಟ್ಟಾರೆ ಕೇಂದ್ರ ಜಿಎಸ್ ಟಿಯಿಂದ 30,574 ಕೋಟಿ ರುಪಾಯಿ ಹಾಗೂ ರಾಜ್ಯ ಜಿಎಸ್ ಟಿಯಿಂದ 35, 015 ಕೋಟಿ ರುಪಾಯಿ ಆದಾಯ ಸಂಗ್ರಹವಾಗಿದೆ.