ಇರಾನ್ ಮೇಲೆ ಅಮೆರಿಕ ನಿರ್ಬಂಧ: ನವೆಂಬರ್ ನಿಂದ ಭಾರತಕ್ಕೆ ಸೌದಿಯಿಂದ 4 ಬಿಲಿಯನ್ ಬ್ಯಾರೆಲ್ ಹೆಚ್ಚುವರಿ ತೈಲ!

ನವೆಂಬರ್ ನಿಂದ ಇರಾನ್ ಮೇಲೆ ಅಮೆರಿಕ ನಿರ್ಬಂಧ ಜಾರಿಯಾಗಲಿದ್ದು, ಭಾರತಕ್ಕೆ ಸೌದಿ ಅರೇಬಿಯಾ ಹೆಚ್ಚುವರಿ 4 ಮಿಲಿಯನ್ ಬ್ಯಾರೆಲ್ ತೈಲವನ್ನು ಪೂರೈಕೆ ಮಾಡಲಿದೆ.
ನವೆಂಬರ್ ನಿಂದ ಇರಾನ್ ಮೇಲೆ ಅಮೆರಿಕ ನಿರ್ಬಂಧ: ಭಾರತಕ್ಕೆ ಸೌದಿ ಅರೇಬಿಯಾದಿಂದ 4 ಬಿಲಿಯನ್ ಬ್ಯಾರೆಲ್ ಹೆಚ್ಚುವರಿ ತೈಲ ಪೂರೈಕೆ
ನವೆಂಬರ್ ನಿಂದ ಇರಾನ್ ಮೇಲೆ ಅಮೆರಿಕ ನಿರ್ಬಂಧ: ಭಾರತಕ್ಕೆ ಸೌದಿ ಅರೇಬಿಯಾದಿಂದ 4 ಬಿಲಿಯನ್ ಬ್ಯಾರೆಲ್ ಹೆಚ್ಚುವರಿ ತೈಲ ಪೂರೈಕೆ
ನವದೆಹಲಿ: ನವೆಂಬರ್ ತಿಂಗಳಲ್ಲಿ ಇರಾನ್ ಮೇಲೆ ಅಮೆರಿಕ ನಿರ್ಬಂಧ ಜಾರಿಯಾಗಲಿದ್ದು, ತೈಲ ಪೂರೈಕೆ ವ್ಯತ್ಯಯವಾಗಲಿದೆ. ಆದರೆ ಭಾರತಕ್ಕೆ ಸೌದಿ ಅರೇಬಿಯಾ ಅದೇ ತಿಂಗಳಲ್ಲಿ ಹೆಚ್ಚುವರಿ 4 ಮಿಲಿಯನ್ ಬ್ಯಾರೆಲ್ ತೈಲವನ್ನು ಪೂರೈಕೆ ಮಾಡಲಿದೆ. 
ರಾಯಟರ್ಸ್ ವರದಿಯ ಪ್ರಕಾರ ಸೌದಿ ಅರೇಬಿಯಾ ಭಾರತಕ್ಕೆ ನವೆಂಬರ್ ತಿಂಗಳಲ್ಲಿ 4 ಬಿಲಿಯನ್ ಬ್ಯಾರೆಲ್ ಹೆಚ್ಚುವರಿ ತೈಲ ಪೂರೈಕೆ ಮಾಡಲಿದೆ ಎಂದು ತಿಳಿದುಬಂದಿದೆ. 
ಚೀನಾದ ನಂತರ ಭಾರತದ ವಿಶ್ವದ ಅತಿ ಹೆಚ್ಚು ಇಂಧನ ಬೇಡಿಕೆ ಹೊಂದಿರುವ ರಾಷ್ಟ್ರವಾಗಿದ್ದು, ಇರಾನ್ ನ ಲ್ಲಿ ಅತಿ ಹೆಚ್ಚು ತೈಲ ಖರೀದಿಸುವ 2 ನೇ ರಾಷ್ಟ್ರ ಭಾರತವಾಗಿದೆ.
ಭಾರತದ ತೈಲ ಕಂಪನಿಗಳಾದ ರಿಲಯನ್ಸ್, ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪ್, ಭಾರತ್ ಪೆಟ್ರೋಲಿಯಂ, ಮಂಗಳೂರು ರಿಫೈನರಿ ಪೆಟ್ರೋ ಕೆಮಿಕಲ್ಸ್ ಸಂಸ್ಥೆಗಳು ನವೆಂಬರ್ ತಿಂಗಳಲ್ಲಿ ತಲಾ 1 ಮಿಲಿಯನ್ ಬ್ಯಾರೆಲ್ ತೈಲ ಪೂರೈಕೆಗೆ ಸೌದಿ ಅರೇಬಿಯಾಗೆ ಮನವಿ ಮಾಡಿವೆ. ಈ ಹಿಂದೆ ಭಾರತದ ತೈಲ ರಿಫೈನರಿಗಳು ಇರಾನ್ ನಿಂದ 9 ಮಿಲಿಯನ್ ಬ್ಯಾರೆಲ್ ತೈಲ ಪೂರೈಕೆಗೆ ಬೇಡಿಕೆ ಇಟ್ಟಿತ್ತು. ಆದರೆ ಅಮೆರಿಕದ ನಿರ್ಬಂಧ ಇರಾನ್ ಮೇಲೆ ನವೆಂಬರ್ ನಿಂದ ಜಾರಿಗೆ ಬರುವ ಹಿನ್ನೆಲೆಯಲ್ಲಿ ಭಾರತ ಪರ್ಯಾಯ ವ್ಯವಸ್ಥೆ ಕಂಡುಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com