ಸತತ 11ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಕುಸಿತ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಮುಖವಾಗಿದ್ದು, ಭಾನುವಾರ ಸತತ 11ನೇ ದಿನವೂ ಇಂಧನ ದರದಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಮುಖವಾಗಿದ್ದು, ಭಾನುವಾರ ಸತತ 11ನೇ ದಿನವೂ ಇಂಧನ ದರದಲ್ಲಿ ಇಳಿಕೆಯಾಗಿದ್ದು, ಜನ ಕೊಂಚ ನಿರಾಳರಾಗಿದ್ದಾರೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂದು ಬೆಳಗ್ಗೆ ಪರಿಷ್ಕೃತ ದರ ಪಟ್ಟಿ ಪ್ರಕಟಿಸಿದ್ದು, ಪೆಟ್ರೋಲ್ ಬೆಲೆ 40 ಪೈಸೆ ಹಾಗೂ ಡೀಸೆಲ್ ಬೆಲೆ 33 ಪೈಸೆ ಇಳಿಕೆಯಾಗಿದೆ. ಕಳೆದ 11 ದಿನದಲ್ಲಿ ಪೆಟ್ರೋಲ್ ಬೆಲೆಯಲ್ಲಿ ಒಟ್ಟಾರೆ ರು.2.76 ಹಾಗೂ ಡೀಸೆಲ್ ಬೆಲೆ ರು. 1.64 ಕಡಿಮೆಯಾಗಿದೆ.
ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ ರು.80.05ಗಳಿದ್ದು, ಡೀಸೆಲ್ ಬೆಲೆ ರು.74.05 ಇದೆ. 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಡಾಲರ್ ಎದುರು ರುಪಾಯಿ ಮೌಲ್ಯ ಸುಧಾರಿಸಿದೆ. ಹೀಗಾಗಿ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತ ಇಳಿಕೆಯಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com