ಗಂಭೀರ ಪರಿಸ್ಥಿತಿ, ಭಾರತದ ಆರ್ಥಿಕ ನೀತಿಯಲ್ಲಿ ವ್ಯಾಪಕ ಬದಲಾವಣೆ ಅಗತ್ಯ: ಐಎಂಎಫ್

ಭಾರತೀಯ ಅರ್ಥವ್ಯವಸ್ಥೆ ಗಂಭೀರ ಪರಿಸ್ಥಿತಿಯಲ್ಲಿದ್ದು, ಇದನ್ನು ಸುಧಾರಿಸಲು ಸರ್ಕಾರ ತನ್ನ ಆರ್ಥಿಕ ನೀತಿಯಲ್ಲಿ ವ್ಯಾಪಕ ಬದಲಾವಣೆ ತರುವ ಅಗತ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ವಾಷಿಂಗ್ಟನ್: ಭಾರತೀಯ ಅರ್ಥವ್ಯವಸ್ಥೆ ಗಂಭೀರ ಪರಿಸ್ಥಿತಿಯಲ್ಲಿದ್ದು, ಇದನ್ನು ಸುಧಾರಿಸಲು ಸರ್ಕಾರ ತನ್ನ ಆರ್ಥಿಕ ನೀತಿಯಲ್ಲಿ ವ್ಯಾಪಕ ಬದಲಾವಣೆ ತರುವ ಅಗತ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ ಭಾರತೀಯ ಅರ್ಥಿಕತೆ ಸಂಬಂಧಿಸಿದಂತೆ ಸೋಮವಾರ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ವರದಿಯಲ್ಲಿ ಭಾರತದ ಆರ್ಥಿಕತೆ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದೆ. ಇದನ್ನು ಸುಧಾರಿಸಲು ಸರ್ಕಾರ ತನ್ನ ಆರ್ಥಿಕ ನೀತಿಯಲ್ಲಿ ವ್ಯಾಪಕ ಬದಲಾವಣೆ ತರುವ ಅಗತ್ಯತೆ ಇದೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಅರ್ಥವ್ಯವಸ್ಥೆಯಲ್ಲಿ ಭಾರಿ ವಿಸ್ತರಣೆಯಾಗಿದ್ದು, ಇದು ಲಕ್ಷಾಂತರ ಜನರನ್ನು ಬಡತನದ ರೇಖೆಯಿಂದ ಮೇಲೆತ್ತುವಲ್ಲಿ ಯಶಸ್ವಿಯಾಗಿದೆ. ಆದರೆ, 2019ರ ಮೊದಲ ಆರು ತಿಂಗಳಲ್ಲಿ ವಿಭಿನ್ನ ಕಾರಣಗಳಿಂದ ಭಾರತೀಯ ಅರ್ಥವ್ಯವಸ್ಥೆ ಕುಸಿದಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಈ ಕುರಿತು ಮಾತನಾಡಿರುವ ಐಎಂಎಫ್ ನ ಏಷ್ಯಾ-ಪೆಸಿಫಿಕ್ ವಿಭಾಗದ ಭಾರತೀಯ ಮುಖ್ಯಸ್ಥ ರನಿಲ್ ಸಲ್ಗಾಡೊ, 'ಭಾರತೀಯ ಅರ್ಥವ್ಯವಸ್ಥೆಯ ಹಿನ್ನಡೆ ಅನುಭವಿಸುತ್ತಿದ್ದು, ಆರ್ಥಿಕ ಕ್ಷೇತ್ರಗಳಲ್ಲಿನ ಸಮಸ್ಯೆಗಳು ಇದಕ್ಕೆ ಕಾರಣ. ನಾವು ಮೊದಲು ಅಂದುಕೊಂಡಷ್ಟು ಸುಧಾರಣೆಯಾಗಿಲ್ಲ ಎಂಬುದು ಪ್ರಮುಖ ವಿಷಯ ಎಂದು ಅಭಿಪ್ರಾಯಪಟ್ಟಿದ್ದಾರೆ.

'ಪ್ರಸಕ್ತ ಆರ್ಥಿಕ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ(GDP) ವೃದ್ಧಿಯ ದರ 4.5ಕ್ಕೆ ಕುಸಿದಿದ್ದು, ಇದು ಕಳೆದ ಆರು ವರ್ಷಗಳಲ್ಲಿ ಅತ್ಯಂತ ಕೆಳಮಟ್ಟದ್ದಾಗಿದೆ. ಆರ್ಥಿಕ ವೃದ್ಧಿಯ ಅಂಕಿ-ಅಂಶಗಳ ಪ್ರಕಾರ ಈ ತ್ರೈಮಾಸಿಕದಲ್ಲಿ ದೇಶೀಯ ಬೇಡಿಕೆ ಕೇವಲ ಶೇ.1 ರಷ್ಟು ಹೆಚ್ಚಾಗಿದೆ. ಬ್ಯಾಂಕೇತರ ಹಣಕಾಸು ಕಂಪನಿಗಳ (ಎನ್‌ಬಿಎಫ್‌ಸಿ) ಸಾಲ ನೀಡುವಿಕೆಯಲ್ಲಿ  ಕಡಿಮೆಯಾಗುವುದೇ ಇದಕ್ಕೆ ಕಾರಣ. ಸಾಲ ನೀಡುವಿಕೆಗೆ ಸಂಬಂಧಿಸಿದ ಪರಿಸ್ಥಿತಿಗಳೂ ಕೂಡ ಕಠಿಣವಾಗಿದ್ದು, ಆದಾಯ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿನ ಆದಾಯ ಕುಸಿದಿದೆ. ಇದರಿಂದ ವೈಯಕ್ತಿಕ ಲಾಭ ಕುಸಿತವಾಗಿದೆ. ಸುಧಾರಣಾ ಕಾರ್ಯಸೂಚಿಯನ್ನು ಸರ್ಕಾರವು ಪುನರುಜ್ಜೀವನಗೊಳಿಸುವ ಅಗತ್ಯವಿದೆ. ಆರ್ಥಿಕ ವಲಯದ ಸುಸ್ಥಿರತೆ ಮರುಸ್ಥಾಪಿಸಬೇಕು ಎಂದು ಸಲ್ಗಾಡೋ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com