ಆರ್ಥಿಕ ಉತ್ತೇಜನ ಪ್ಯಾಕೇಜ್ ಮ್ಯಾಜಿಕ್; ಸೆನ್ಸೆಕ್ಸ್ ದಾಖಲೆ ಏರಿಕೆ, ರೂಪಾಯಿ ಮೌಲ್ಯ ಹೆಚ್ಚಳ

ಆರ್ಥಿಕ ಹಿಂಜರಿಕೆ ಮತ್ತು ಕೈಗಾರಿಕಾ ವಲಯದ ಉತ್ಪಾದನಾ ಪ್ರಮಾಣ ಕುಸಿತದ ಹಿನ್ನಲೆಯಲ್ಲಿ ಕೇಂದ್ರ ವಿತ್ತ ಸಚಿವೆ ಆರ್ಥಿಕ ಉತ್ತೇಜನದ ಪ್ಯಾಕೇಜ್ ಘೋಷಣೆ ಮಾಡಿದ ಬೆನ್ನಲ್ಲೇ ಷೇರುಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ದಾಖಲೆಯ ಏರಿಕೆ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಒಂದೇ ದಿನ 1921.15 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್, ನಿಫ್ಟಿ 569.40 ಅಂಕಗಳ ಏರಿಕೆ

ಮುಂಬೈ: ಆರ್ಥಿಕ ಹಿಂಜರಿಕೆ ಮತ್ತು ಕೈಗಾರಿಕಾ ವಲಯದ ಉತ್ಪಾದನಾ ಪ್ರಮಾಣ ಕುಸಿತದ ಹಿನ್ನಲೆಯಲ್ಲಿ ಕೇಂದ್ರ ವಿತ್ತ ಸಚಿವೆ ಆರ್ಥಿಕ ಉತ್ತೇಜನದ ಪ್ಯಾಕೇಜ್ ಘೋಷಣೆ ಮಾಡಿದ ಬೆನ್ನಲ್ಲೇ ಷೇರುಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ದಾಖಲೆಯ ಏರಿಕೆ ಕಂಡಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ದೇಶಿಯ ಉತ್ಪಾದನಾ ಕಂಪನಿಗಳ ಕಾರ್ಪೋರೇಟ್​ ತೆರಿಗೆ ಹಾಗೂ ಆದಾಯ ತೆರಿಗೆ ಇಳಿಸಿರುವ ಕುರಿತು ಘೋಷಣೆ ಮಾಡಿದ ಬೆನ್ನಲ್ಲೇ ಮುಂಬೈ ಷೇರುಪೇಟೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಬಿಎಸ್ ಇ ಸೆನ್ಸೆಕ್ಸ್ ದಿನದಂತ್ಯಕ್ಕೆ  1921.15 ಅಂಕಗಳ ಏರಿಕೆ ಕಂಡಿದ್ದು, ನಿಫ್ಚಿ ಕೂಡ 569.40 ಅಂಕಗಳ ಏರಿಕೆ ಕಂಡಿತು.

ರೂಪಾಯಿ ಮೌಲ್ಯ ಹೆಚ್ಚಳ
ಇದೇ ವೇಳೆ ಷೇರುಮಾರುಕಟ್ಟೆಯ ಚೇತೋಹಾರಿ ವಹಿವಾಟು ರೂಪಾಯಿ ಮೌಲ್ಯದಲ್ಲಿಯೂ ಸಕಾರಾತ್ಮಕ ಪರಿಣಾಮ ಬೀರಿದ್ದು, ರೂಪಾಯಿ ಮೌಲ್ಯದಲ್ಲಿ ಬರೊಬ್ಬರಿ 30 ಪೈಸೆ ಹೆಚ್ಚಳವಾಗಿದೆ. ಆ ಮೂಲಕ ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ 30 ಪೈಸೆ ಹೆಚ್ಚಳವಾಗಿದ್ದು, 70.67 ರೂ.ಗಳಾಗಿವೆ.

ಗೋವಾದಲ್ಲಿ ಇದು ಸುದ್ದಿಗೋಷ್ಠಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು, ಕಾರ್ಪೋರೇಟ್​ ತೆರಿಗೆಗಳನ್ನು ಕಡಿತಗೊಳಿಸುವ ಸುಗ್ರಿವಾಜ್ಞೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು. ಅಂತೆಯೇ ದೇಶಿಯ ಕಂಪನಿಗಳು ಪಾವತಿಸುವ ಆದಾಯ ತೆರಿಗೆಯನ್ನು 2019-20ನೇ ಸಾಲಿನ ಬೆಜೆಟ್​ನಲ್ಲಿ ಹೆಚ್ಚಿಸಲಾಗಿತ್ತು. ಆದರೆ ಈಗ ಅದನ್ನು ಶೇ.22ಕ್ಕೆ ಇಳಿಸಲಾಗಿದೆ. ಈ ಎಲ್ಲ ಕಡಿತಗಳಿಂದಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿರೀಕ್ಷಿಸಲಾಗಿದ್ದ ಆದಾಯದಲ್ಲಿ 1,45,000 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com