ಈ ವರ್ಷ ಸ್ವಲ್ಪ ಬಡವಾದ ಮುಖೇಶ್ ಅಂಬಾನಿ, ಆದರೂ ಭಾರತದ ನಂ.1 ಶ್ರೀಮಂತ

ಭಾರತದ ನಂ.1 ಶ್ರೀಮಂತ ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್‌ ಅಂಬಾನಿ ಅವರ ಆಸ್ತಿಯಲ್ಲಿ ಈ ವರ್ಷ ಸ್ವಲ್ಪ ಇಳಿಕೆಯಾಗಿದೆ. ಆದರೂ ಅವರು ಸತತ 8ನೇ ಬಾರಿಗೆ ದೇಶದಲ್ಲೇ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. 
ಮುಖೇಶ್ ಅಂಬಾನಿ
ಮುಖೇಶ್ ಅಂಬಾನಿ

ಮುಂಬೈ: ಭಾರತದ ನಂ.1 ಶ್ರೀಮಂತ ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್‌ ಅಂಬಾನಿ ಅವರ ಆಸ್ತಿಯಲ್ಲಿ ಈ ವರ್ಷ ಸ್ವಲ್ಪ ಇಳಿಕೆಯಾಗಿದೆ. ಆದರೂ ಅವರು ಸತತ 8ನೇ ಬಾರಿಗೆ ದೇಶದಲ್ಲೇ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. 

ಮುಖೇಶ್ ಅಂಬಾನಿ ಅವರು 3,80,700 ಕೋಟಿ ರೂ. ಆಸ್ತಿಯನ್ನು ಹೊಂದುವ ಮೂಲಕ ಅತೀ ಶ್ರೀಮಂತ ಭಾರತೀಯನಾಗಿ ಮುಂದುವರೆದಿದ್ದಾರೆ ಎಂದು ಐಐಎಫ್ಎಲ್‌ ವೆಲ್ತ್‌ ಹುರುನ್‌ ಇಂಡಿಯಾ ರಿಚ್‌ ಲಿಸ್ಟ್‌ 2019ರ ಸಮೀಕ್ಷೆ ತಿಳಿಸಿದೆ.

ಜಿಯೋ ಮೂಲಕ ದೇಶದ ಟೆಲಿಕಾಂ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಆಸ್ತಿ 2019ನೇ ಸಾಲಿನಲ್ಲಿ ಶೇ. 7ರಷ್ಟು ಕುಸಿತ ಕಂಡಿದೆ ಎಂದು ಸಮೀಕ್ಷೆ ವಿವರಿಸಿದೆ.

ಇನ್ನು ಎರಡನೇ ಸ್ಥಾನವನ್ನು ಲಂಡನ್‌ ಮೂಲದ ಎಸ್‌ಪಿ ಹಿಂದುಜಾ ಮತ್ತು ಕುಟುಂಬ ಹೊಂದಿದೆ. ಇವರ ಆಸ್ತಿ 1,86,500 ಕೋಟಿ ರೂ. ಆಗಿದೆ. ಮೂರನೇ ಸ್ಥಾನವನ್ನು ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಪಡೆದಿದ್ದಾರೆ. ಅವರ ಆಸ್ತಿ ಮೊತ್ತ 1,17,100 ಕೋಟಿ ರೂ. ಆಗಿದೆ. 
ಮೂರನೇ ಸ್ಥಾನವನ್ನು ಆರ್ಸೆಲರ್‌ ಮಿತ್ತಲ್‌ ಸಿಇಒ (1,07,300 ಕೋಟಿ ರೂ.) ಮತ್ತು 5ನೇ ಸ್ಥಾನವನ್ನು ಅದಾನಿ ಸಮೂಹದ ಗೌತಮ್‌ ಅದಾನಿ (94,500 ರೂ.) ಹೊಂದಿದ್ದಾರೆ.

ಸಮೀಕ್ಷೆ ಪ್ರಕಾರ 1 ಸಾವಿರ ಕೋಟಿ ರೂ.ಗಳಿಗೆ ಮಿಕ್ಕಿ ಆಸ್ತಿ ಹೊಂದಿದವರ ಸಂಖ್ಯೆ 953ಕ್ಕೇರಿದೆ. ಈ ಹಿಂದಿನ ವರ್ಷ ಇವರ ಸಂಖ್ಯೆ 831 ಇತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com