ಸಾರ್ವಕಾಲಿಕ ದಾಖಲೆ ಬರೆದ ಷೇರುಮಾರುಕಟ್ಟೆ, 41,185.03ಕ್ಕೆ ತಲುಪಿದ ಸೆನ್ಸೆಕ್ಸ್

ಭಾರತೀಯ ಷೇರುಮಾರುಕಟ್ಟೆ 175 ಅಂಕಗಳ ಏರಿಕೆಯೊಂದಿಗೆ 41,185.03 ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತೀಯ ಷೇರುಮಾರುಕಟ್ಟೆ 175 ಅಂಕಗಳ ಏರಿಕೆಯೊಂದಿಗೆ 41,185.03 ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಕಂಡಿದೆ.

ಹೌದು.. ಇಂದು ವಾರದ ಮೊದಲ ದಿನದ ಆರಂಭದ ವಹಿವಾಟಿನಲ್ಲೇ ಸೆನ್ಸೆಕ್ಸ್ 175 ಅಂಕಗಳ ಏರಿಕೆ ಕಾಣುವ ಮೂಲಕ ಸಾರ್ವಕಾಲಿಕೆ ದಾಖಲೆ ನಿರ್ಮಾಣ ಮಾಡಿದ್ದು, ಷೇರುಪೇಟೆ ಸೆನ್ಸೆಕ್ಸ್​ 41,185.03 ಪಾಯಿಂಟ್​ಗೆ ತಲುಪಿ ದಾಖಲೆ ಬರೆದಿದೆ.

ಆರಂಭಿಕ ಸೆಷನ್‌ನಲ್ಲಿ ಸೆನ್ಸೆಕ್ಸ್ 175.32 ಪಾಯಿಂಟ್‌ಗಳ ಏರಿಕೆ ಕಂಡು 41,185.03 ಕ್ಕೆ ತಲುಪಿದ್ದರೆ, ನಿಫ್ಟಿ 47.95 ಅಂಕಗಳೊಂದಿಗೆ 12,134.65 ಕ್ಕೆ ತಲುಪಿದೆ. ಇನ್ನು ಕಳೆದ ಶುಕ್ರವಾರ ಶೇ.1ರಷ್ಟು ಹೆಚ್ಚಾಗಿದ್ದ ಸೆನ್ಸೆಕ್ಸ್ ಇಂದು ಬೆಳಗ್ಗೆ 9.17ರ ಹೊತ್ತಿಗೆ 117.03 ( 0.29%) ಏರಿಕೆಯಾಗಿ 41,126.74 ತಲುಪಿತ್ತು. ಈ ವೇಳೆ ನಿಫ್ಟಿ ಕೂಡ 35.80 ಪಾಯಿಂಟ್​ ಏರಿಕೆಯಾಗಿ 12,122.50 ಅಂಕ ಮುಟ್ಟಿತ್ತು.  ಶುಕ್ರವಾರ ಸೆನ್ಸೆಕ್ಸ್​ 564.56 ಅಂಕ ಗಳಿಸಿತ್ತು. ಆ ಮೂಲಕ ಸೆನ್ಸೆಕ್ಸ್ ತನ್ನ ಈ ಹಿಂದೆ ಗರಿಷ್ಠ ದಾಖಲೆಯನ್ನು ಹಿಂದಿಕ್ಕಿದೆ.

ಕಳೆದ ವಾರ ನಡೆದ ಯುಕೆ ಸಾರ್ವತ್ರಿಕ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ಗೆಲುವು ಹಾಗೂ ಯುಎಸ್ -ಚೀನಾ ವ್ಯಾಪಾರ ಒಪ್ಪಂದ ಷೇರುಪೇಟೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಇನ್ನು ಇತ್ತೀಚಿನ ವರದಿಗಳ ಅನ್ವಯ ಸೆನ್ಸೆಕ್ಸ್ 41.24 ಅಂಕಗಳ ಇಳಿಕೆಯೊಂದಿಗೆ 40,985.05 ಅಂಕಗಳಿಗೆ ಕುಸಿದಿದ್ದು, ನಿಫ್ಟಿ ಕೂಡ 16.55 ಅಂಕಗಳ ಕುಸಿತದಿಂದಾಗಿ 12,069.75 ಅಂಕಗಳಿಗೆ ಕುಸಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com