ಪೆಟ್ರೋಲ್‌, ಡೀಸೆಲ್‌ ಬೆಲೆ ಮೂರನೇ ದಿನವೂ ಏರಿಕೆ

ಸತತ ಮೂರನೇ ದಿನವೂ ತೈಲೋತ್ಪನ್ನ ಕಂಪನಿಗಳು ಪೆಟ್ರೋಲ್, ಡೀಸೆಲ್‌ ದರ ಏರಿಕೆ ಮಾಡಿದ್ದು, ಪ್ರತಿ ಲೀಟರ್‌ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ದರವನ್ನು ಕ್ರಮವಾಗಿ 54 ಪೈಸೆ ಮತ್ತು 58 ಪೈಸೆ ಹೆಚ್ಚಿಸಲಾಗಿದೆ.
ಪೆಟ್ರೋಲ್ ಬಂಕ್
ಪೆಟ್ರೋಲ್ ಬಂಕ್
Updated on

ನವದೆಹಲಿ: ಸತತ ಮೂರನೇ ದಿನವೂ ತೈಲೋತ್ಪನ್ನ ಕಂಪನಿಗಳು ಪೆಟ್ರೋಲ್, ಡೀಸೆಲ್‌ ದರ ಏರಿಕೆ ಮಾಡಿದ್ದು, ಪ್ರತಿ ಲೀಟರ್‌ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ದರವನ್ನು ಕ್ರಮವಾಗಿ 54 ಪೈಸೆ ಮತ್ತು 58 ಪೈಸೆ ಹೆಚ್ಚಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಭಾನುವಾರದಿಂದ ಇಂಧನ ಬೆಲೆ ಹೆಚ್ಚಳ ಮಾಡಲು ಆರಂಭಿಸಿದ್ದು, ಸತತವಾಗಿ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿವೆ. ಮೂರು ದಿನಗಳಲ್ಲಿ ಪೆಟ್ರೋಲ್‌ ಬೆಲೆ  1.74 ರೂ ಮತ್ತು ಡೀಸೆಲ್‌ ಬೆಲೆ ರೂ 1.78ರಂತೆ ತುಟ್ಟಿಯಾಗಿದ್ದು, ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ಈಗ  75.29ರೂ ಗೆ ಮತ್ತು ಡೀಸೆಲ್‌ ಬೆಲೆ  67.74ರೂಗೆ ಏರಿಕೆ ಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 73ರೂ ಗೆ ಏರಿಕೆಯಾಗಿದ್ದು, ಡೀಸೆಲ್ ದರ 71.17 ರೂಗ ಏರಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com