ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಭಾರೀ ಇಳಿಕೆ! ಎಲ್ಲೆಲ್ಲಿ ಎಷ್ಟು ದರ ಇಲ್ಲಿದೆ ಮಾಹಿತಿ

ಸತತ ಮೂರನೇ ಬಾರಿ ಇಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆಯಾಗಿದೆ. ಒಂದು ಸಿಲಿಂಡರ್ ಬೆಲೆಯಲ್ಲಿ ₹160 ಕಡಿತ ಮಾಡಲಾಗಿದೆ. ದೆಹಲಿಯಲ್ಲಿ, 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿಸಿಲಿಂಡರ್‌ನ ಬೆಲೆಯನ್ನು ಇಂದಿನಿಂದ ಜಾರಿಗೆ ಬರುವಂತೆ ₹ 744 ರಿಂದ ₹ 581.50 ಕ್ಕೆ ಇಳಿಸಲಾಗಿದೆ.  ತೈಲ ಮಾರುಕಟ್ಟೆ ಕಂಪನಿಗಳು ದೇಶದ ಇತರ ಭಾಗಗಳಲ್ಲಿ ಇದೇ ರೀತಿಯ ದರ ಕಡಿತವನ್ನು ಜಾರಿಗ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಸತತ ಮೂರನೇ ಬಾರಿ ಇಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆಯಾಗಿದೆ. ಒಂದು ಸಿಲಿಂಡರ್ ಬೆಲೆಯಲ್ಲಿ ₹162.50 ಕಡಿತ ಮಾಡಲಾಗಿದೆ. ದೆಹಲಿಯಲ್ಲಿ, 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿಸಿಲಿಂಡರ್‌ನ ಬೆಲೆಯನ್ನು ಇಂದಿನಿಂದ ಜಾರಿಗೆ ಬರುವಂತೆ ₹ 744 ರಿಂದ ₹ 581.50 ಕ್ಕೆ ಇಳಿಸಲಾಗಿದೆ.  ತೈಲ ಮಾರುಕಟ್ಟೆ ಕಂಪನಿಗಳು ದೇಶದ ಇತರ ಭಾಗಗಳಲ್ಲಿ ಇದೇ ರೀತಿಯ ದರ ಕಡಿತವನ್ನು ಜಾರಿಗೊಳಿಸಿವೆ.

ಮುಂಬೈಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗೆ ₹ 579 ಇರಲಿದ್ದು  ಕೋಲ್ಕತ್ತಾದಲ್ಲಿ ಅಡುಗೆ ಅನಿಲ ಇಂಧನ ದರವ ₹ 584.50 ಕ್ಕೆ ಇಳಿದಿದೆ.   ಚೆನ್ನೈನಲ್ಲಿ ಎಲ್‌ಪಿಜಿ ಸಿಲಿಂಡರ್‌ದರ  ರೂ .569.50 ತಲುಪಿದೆ. ಬೆಂಗಳೂರಿನಲ್ಲಿ ₹585 ಗೆ ನಿಗದಿಯಾಗಿದೆ.

ಜಾಗತಿಕ ಇಂಧನ ಮಾರುಕಟ್ಟೆ ಕುಸಿತದ ನಡುವೆ ಕಳೆದ ಎರಡು ತಿಂಗಳುಗಳಲ್ಲಿ ಬೆಲೆಗಳನ್ನು ಕಡಿತಗೊಳಿಸಲಾಗುತ್ತಿದ್ದು ತಿಂಗಳ ಮೊದಲ ದಿನ ಬೆಲೆ ಪರಿಷ್ಕರಣೆ ನಡೆಯುತ್ತಿದೆ. ಕೊರೋನಾ ಸಂಬಂಧಿತ ಲಾಕ್‌ಡೌನ್ ಮಾರ್ಚ್ 25 ರಿಂದ ಪ್ರಾರಂಭವಾದಾಗಿನಿಂದ, ಎಲ್‌ಪಿಜಿ ಸಿಲಿಂಡರ್‌ಗಳ ಖರೀದಿ ಹೆಚ್ಚಾಗಿದೆ.  ಸ್ಥಳೀಯ ಬೇಡಿಕೆಯನ್ನು ಪೂರೈಸಲು ಸಾಕಷ್ಟು ದಾಸ್ತಾನು ಇರುವುದರಿಂದ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಲ್ಲ ಎಂದು ಚಿಲ್ಲರೆ ವ್ಯಾಪಾರಿಗಳು ಒತ್ತಿಹೇಳಿದ್ದಾರೆ.

ಭಾರತದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿ ಇಂಡಿಯನ್ ಆಯಿಲ್ ಕಾರ್ಪ್ ಲಿಮಿಟೆಡ್ (ಐಒಸಿ) ಏಪ್ರಿಲ್ ನಲ್ಲಿ ಸಿಲಿಂಡರ್  ಮಾರಾಟದಲ್ಲಿ 20% ಹೆಚ್ಚಳವಾಗಿದೆ ಎಂದು ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com