ಕೊರೋನಾ ಆರ್ಭಟದ ನಡುವೆಯೇ 2 ಸಾವಿರ ಅಂಕ ಕುಸಿತ ಕಂಡ ಸೆನ್ಸೆಕ್ಸ್!

ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿರುವಂತೆಯೇ ಇತ್ತ ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಬರೊಬ್ಬರಿ 2 ಸಾವಿರ ಅಂಕಗಳಷ್ಟು ಕುಸಿತ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿರುವಂತೆಯೇ ಇತ್ತ ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಬರೊಬ್ಬರಿ 2 ಸಾವಿರ ಅಂಕಗಳಷ್ಟು ಕುಸಿತ ಕಂಡಿದೆ.

ಕೊರೋನಾ ವೈರಸ್ ಆರ್ಭಟದ ನಡುವೆಯೇ ಇಂದು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 2000 ಅಂಶ ಕುಸಿದಿದೆ. ದೇಶದಾದ್ಯಂತ ಮೂರನೇ ಬಾರಿಗೆ ಲಾಕ್‌ಡೌನ್‌ ಮುಂದುವರಿದಿರುವುದು, ಅಮೆರಿಕ ಮತ್ತು ಚೀನಾ ನಡುವಿನ ಬಿಕ್ಕಟ್ಟು ಹಾಗೂ ಜಾಗತಿಕ ಷೇರುಪೇಟೆಗಳಲ್ಲಿನ ವಹಿವಾಟು ದೇಶೀಯ ಷೇರುಗಳ ಮೇಲೆ ಪ್ರಭಾವ ಬೀರಿದ್ದು, ಇಂದಿನ ಮಾರುಕಟ್ಟೆ ಕುಸಿತಕ್ಕೆ ಇದೇ ಕಾರಣ ಎನ್ನಲಾಗಿದೆ.

ಸೆನ್ಸೆಕ್ಸ್‌ ಇಂದು 2,002.27 ಅಂಕಗಳ (ಶೇ 5.94) ಕುಸಿತವಾಗಿ 31,715.35 ಅಂಶಗಳಲ್ಲಿ ವಹಿವಾಟು ಮುಕ್ತಾಯಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 566.40 ಅಂಕಗಳ (ಶೇ 5.74)  ಕುಸಿತವಾಗಿ 9,293.50 ಕ್ಕೆ ಕುಸಿದಿದೆ. 

ಇಂದಿನ ವಹಿವಾಟಿನಲ್ಲಿ ಪ್ರಮುಖವಾಗಿ ಲೋಹ, ಫೈನಾನ್ಸ್‌, ಆಟೊ ವಲಯದ ಷೇರುಗಳು ತೀವ್ರ ನಷ್ಟಕ್ಕೆ ಒಳಗಾಗಿವೆ. 

ವಾಹನ ತಯಾರಿಕಾ ವಲಯಕ್ಕೆ ಬಾರಿ ಪೆಟ್ಟು
ಲಾಕ್‌ಡೌನ್‌ ಅವಧಿಯಲ್ಲಿ ವಾಹನ ತಯಾರಿಕಾ ಕಂಪನಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು. ಹೀಗಾಗಿ ಮಾರುತಿ ಸುಜಿಕಿ ಸೇರಿದಂತೆ ಹಲವು ಸಂಸ್ಥೆಗಳು ಶೂನ್ಯ ವಾಹನ ಮಾರಾಟ ಕಂಡಿದೆ. ಹೀಗಾಗಿ ಟಾಟಾ ಮೋಟಾರ್ಸ್‌ ಷೇರು ಶೇ 12.45ರಷ್ಟು ಕಡಿಮೆಯಾಗಿದ್ದು, ಮದರ್‌ಸನ್‌ ಸುಮಿ ಸಿಸ್ಟಮ್ಸ್‌ ಷೇರು ಮೌಲ್ಯ ಶೇ 12.27, ಅಪೊಲೊ ಟೈರ್ಸ್‌ ಶೇ 9.45, ಹೀರೊ ಮೊಟೊಕಾರ್ಪ್‌ ಶೇ 8.34, ಮಾರುತಿ ಸುಜುಕಿ ಶೇ 8, ಅಶೋಕ ಲೇಲ್ಯಾಂಡ್‌ ಶೇ 7.83, ಟಿವಿಎಸ್‌ ಮೋಟಾರ್ಸ್‌ ಕಂಪನಿ ಶೇ 7.16, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಶೇ 6.95, ಬಜಾಜ್‌ ಆಟೊ ಶೇ 6.66 ಹಾಗೂ ಐಷರ್‌ ಮೋಟಾರ್ಸ್‌ ಷೇರು ಬೆಲೆ ಶೇ 6.30ರಷ್ಟು ಕಡಿಮೆಯಾಗಿದೆ. 

ಹಿಂದುಸ್ತಾನ್ ಯೂನಿಲಿವರ್‌ , ರಿಲಯನ್ಸ್‌ , ಐಸಿಐಸಿಐ ಬ್ಯಾಂಕ್‌, ಟಾಟಾ ಸ್ಟೀಲ್‌, ಇನ್ಫೊಸಿಸ್‌, ಐಟಿಸಿ ಷೇರುಗಳ ಬೆಲೆ ಶೇ 2ರಿಂದ ಶೇ 10.5ರಷ್ಟು ಇಳಿಕೆ ದಾಖಲಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com