ಜರ್ಮನಿಯ ಶೂ ತಯಾರಕ Von Wellx ಚೀನಾದಿಂದ ಭಾರತಕ್ಕೆ ವರ್ಗಾವಣೆ! 

ಜರ್ಮನಿಯ ಶೂ ತಯಾರಕ ಸಂಸ್ಥೆ Von Wellx ಹಲವು ಸುತ್ತಿನ ಮಾತುಕತೆಯ ನಂತರ ಚೀನಾದಿಂದ ತನ್ನ ಉತ್ಪಾದನಾ ಘಟಕವನ್ನು ಭಾರತಕ್ಕೆ ವರ್ಗಾವಣೆ ಮಾಡಲು ನಿರ್ಧರಿಸಿದೆ. 
ಜರ್ಮನಿಯ ಶೂ ತಯಾರಕ ಸಂಸ್ಥೆ ಚೀನಾದಿಂದ ಭಾರತಕ್ಕೆ ವರ್ಗಾವಣೆ!
ಜರ್ಮನಿಯ ಶೂ ತಯಾರಕ ಸಂಸ್ಥೆ ಚೀನಾದಿಂದ ಭಾರತಕ್ಕೆ ವರ್ಗಾವಣೆ!

ಜರ್ಮನಿಯ ಶೂ ತಯಾರಕ ಸಂಸ್ಥೆ Von Wellx ಹಲವು ಸುತ್ತಿನ ಮಾತುಕತೆಯ ನಂತರ ಚೀನಾದಿಂದ ತನ್ನ ಉತ್ಪಾದನಾ ಘಟಕವನ್ನು ಭಾರತಕ್ಕೆ ವರ್ಗಾವಣೆ ಮಾಡಲು ನಿರ್ಧರಿಸಿದೆ. 

ಸಂಸ್ಥೆಯ ಮಾಲಿಕ ಕಾಸಾ ಎವರ್ಜ್ ಜಿಎಂಬಿ ಈ ಬಗ್ಗೆ ನಿರ್ಧರಿಸಿದ್ದು, Von Wellx ನ ಉತ್ಪಾದನಾ ಘಟಕವನ್ನು ಭಾರತಕ್ಕೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. 

Von Wellx ಸಂಸ್ಥೆ ಮೂರು ಮಿಲಿಯನ್ ಗೂ ಹೆಚ್ಚಿನ ಜೊತೆಗಳನ್ನು ವಾರ್ಷಿಕವಾಗಿ ಚೀನಾದಲ್ಲಿ ಉತ್ಪಾದನೆ ಮಾಡಲಾಗುತ್ತಿತ್ತು. ಈಗ ಈ ಉತ್ಪಾದನಾ ಘಟಕವನ್ನು ಭಾರತಕ್ಕೆ, ಪ್ರಾರಂಭಿಕ 110 ಕೋಟಿ ರೂಪಾಯಿಗಳ ಹೂಡಿಕೆ ಮೂಲಕ ವರ್ಗಾವಣೆ ಮಾಡಲಿದೆ. 

ಉತ್ತರ ಪ್ರದೇಶದಲ್ಲಿ ಲ್ಯಾಟ್ರಿಕ್ ಇಂಡಸ್ಟ್ರೀಸ್ ನ ಸಹಯೋಗದಲ್ಲಿ ಮೂರು ಮಿಲಿಯನ್ ಜೊತೆ ಶೂಗಳನ್ನು ಉತ್ಪಾದಿಸುವ ಸಾಮರ್ಥ್ಯವುಳ್ಳ ಹೊಸ ಉತ್ಪಾದನಾ ಘಟಕ ಪ್ರಾರಂಭವಾಗಲಿದೆ.  
 
ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com