ಪ್ರಖ್ಯಾತ ಕಾರು ತಯಾರಿಕಾ ಕಂಪನಿ 'ಟೆಸ್ಲಾ'ದಿಂದ ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆ

ವಿಶ್ವದ ಪ್ರಖ್ಯಾತ ಕಾರು ತಯಾರಿಕಾ ಕಂಪನಿ ಟೆಸ್ಲಾ ರಾಜ್ಯದಲ್ಲಿ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಮುಂದಾಗಿದೆ.
ಟೆಸ್ಲಾ ಕಾರಿನ ಲೋಗೋ
ಟೆಸ್ಲಾ ಕಾರಿನ ಲೋಗೋ

ಬೆಂಗಳೂರು: ವಿಶ್ವದ ಪ್ರಖ್ಯಾತ ಕಾರು ತಯಾರಿಕಾ ಕಂಪನಿ ಟೆಸ್ಲಾ ರಾಜ್ಯದಲ್ಲಿ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಮುಂದಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮಾಹಿತಿ ತಂತ್ರಜ್ಞಾನ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ಅವರು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಶೋಧೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಟೆಸ್ಲಾ ಮುಂದಾಗಿದೆ ಎಂದು ಹೇಳಿದ್ದಾರೆ. 

ಕಾರು ತಯಾರಿಕಾ ಕಂಪನಿಗಳಲ್ಲಿಯೇ ಅತೀ ದೊಡ್ಡ ಹೆಸರನ್ನು ಹೊಂದಿರುವ ಟೆಸ್ಲಾ ಭಾರತಕ್ಕೂ ಲಗ್ಗೆ ಇಡುತ್ತಿದ್ದು, ಇದಕ್ಕಾಗಿ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ ಸ್ಥಾಪನೆಗಾಗಿ ಬೆಂಂಗಳೂರಿಗೆ ಬರುತ್ತಿದೆ. 

ಅಕ್ಟೋಬರ್ ತಿಂಗಳಿನಲ್ಲಿ ಮಹಾರಾಷ್ಟ್ರ ಸರ್ಕಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಟೆಸ್ಲಾ ಕಂಪನಿಯ ತಂಡವನ್ನು ಸಂಪರ್ಕಿಸಿತ್ತು. ರಾಜ್ಯದಲ್ಲಿ ಅಮೆರಿಕಾದ ಹೂಡಿಕೆದಾರರು ಹೂಡಿಕೆ ಮಾಡಲು ಇದೇ ವೇಳೆ ಉತ್ತೇಜನವನ್ನೂ ನೀಡಲಾಗಿತ್ತು. 

ನೆಲೆ ಸ್ಥಾಪಿಸಲು ರಾಜ್ಯದ ಕೈಗಾರಿಕಾ ಸಚಿವರು ಟೆಸ್ಲಾ ತಂಡದೊಂದಿಗೆ ಸಂಪರ್ಕದಲ್ಲಿದ್ದಾರೆಂದು ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಆದಿತ್ಯಾ ಠಾಕ್ರೆಯವರು ಹೇಳಿದ್ದರು. 

ಕೇವಲ ಹೂಡಿಕೆ ಅಂಶದಿಂದಾಗಿ ಮಾತ್ರವಲ್ಲದೆ ಚಲನಶೀಲತೆ ಮತ್ತು ಸುಸ್ಥಿರತೆಯ ಬಗ್ಗೆ ಇರುವ ವೈಯಕ್ತಿಕ ನಂಬಿಕೆಗೂ ಟೆಸ್ಲಾ ಅವರನ್ನು ಮಹಾರಾಷ್ಟ್ರಕ್ಕೆ ಆಹ್ವಾನಿಸಲು ಉತ್ಸುಕನಾಗಿದ್ದೇನೆ ಎಂದು ಠಾಕ್ರೆಯವರು ಹೇಳಿದ್ದರು. 

ಈ ನಡುವೆ ಭಾರತದಲ್ಲಿ ಹೂಡಿಕೆ ಯೋಜನೆಗಳಿಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಕೂಡ ಟೆಸ್ಲಾ ಅವರೊಂದಿಗೆ ಮಾತುಕತೆ ನಡೆಸಿದೆ ಎಂದು ಹೇಳಲಾಗುತ್ತಿದೆ. 

ಇನ್ನು ಬೆಂಗಳೂರಿನಲ್ಲಿ ಇದೇ ತಿಂಗಳ 19ರಿಂದ 21ರವರೆಗು ನಗರದಲ್ಲಿ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ -2020ರ 23ನೇ ಆವೃತ್ತಿಯನ್ನು ವರ್ಚವಲ್ ಮಾಧ್ಯಮದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. 

ರಾಜ್ಯದ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಈ ಶೃಂಗಸಭೆ ನಡೆಯಲಿದ್ದು, ಸುಮಾರು 25ಕ್ಕೂ ಹೆಚ್ಚು ದೇಶಗಳ ತಂತ್ರಜ್ಞರು ಭಾಗವಹಿಸುವ ನಿರೀಕ್ಷೆಗಳಿವೆ. ಇಡೀ ವಿಶ್ವವು ಕೊರೋನಾ ಪಿಡುಗನ್ನು ಎದುರಿಸುತ್ತಿದ್ದರೂ ಈ ಶೃಂಗಸಭೆ ನಿಗದಿಯಂತೆ ನಡೆಯುತ್ತಿದೆ. ಆದರೆ, ಇದೇ ಮೊದಲ ಬಾರಿಗೆ ವರ್ಚುವಲ್ ಮಾಧ್ಯಮದಲ್ಲಿ ಆಯೋಜನೆಯಾಗುತ್ತಿರುವುದು ವಿಶೇಷವಾಗಿದೆ ಎಂದು ಅಶ್ವತ್ಥ್ ನಾರಾಯಣ್ ಅವರು ತಿಳಿಸಿದ್ದಾರೆ. 

23ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು ಪ್ರಧಾನಿ ಮೋದಿಯವರು ಉದ್ಘಾಟಿಸಲು ಒಪ್ಪಿಕೊಂಡಿರುವುದು ಸಂತಸದ ಸಂಗತಿ. ಈ ಶೃಂಗಸಭೆಯಲ್ಲಿ 80 ಜಾಗತಿಕ ಪ್ರತಿಭಾನ್ವಿತರು ಸೇರಿದಂತೆ 250ಕ್ಕೂ ಹೆಚ್ಚು ವಿಷಯ ಪರಿಣತರು ವಿವಿಧ ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ. ಅಂತರಿಕ್|, ರಕ್ಷಣಾ ತಂತ್ರಜ್ಞಾನ, ಕೃಷಿ, ಆರೋಗ್ಯ, ರಕ್ಷಣೆ, ಉದ್ಯೋಗದ ಭವಿಷ್ಯ, ಪೌಷ್ಟಿಕತೆ, ಪರಿಸರ, ನೈರ್ಮಲ್ಯ ಮತ್ತು ಸಾರ್ವಜನಿಕ ಒಳಿತಿಗಾಗಿ ನವೋದ್ಯಮ, ಎಲೆಕ್ಟ್ರಾನಿಕ್ ಮತ್ತು ಸೆಮಿಕಂಡಕ್ಟರ್, ಡಿಜಿಟಲ್ ಆರೋಗ್ಯದ ರೀ ಇಮೇಜಿಂಗ್ ಮತ್ತು ಕೊರೋನಾ ಪಿಡುಗು ನಿಯಂತ್ರಣ ಸಿದ್ಧತೆ ಮುಂದಾವು ಪ್ರಮುಖವಾಗಿವೆ. ಪ್ರಮುಖ ಕಂಪನಿಗಳು ಒಳಗೊಂಡ 250ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com