ಸಗಟು ಹಣದುಬ್ಬರ ಜೂನ್‌ನಲ್ಲಿ ಶೇ. 12.07ಕ್ಕೆ ಇಳಿಕೆ!

ಮೇನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ಶೇಕಡ 12.94ಕ್ಕೆ ಮುಟ್ಟಿದ್ದ ಸಗಟು ಹಣದುಬ್ಬರ ಜೂನ್ ನಲ್ಲಿ ಸ್ವಲ್ಪ ಇಳಿಕೆ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಮೇನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ಶೇಕಡ 12.94ಕ್ಕೆ ಮುಟ್ಟಿದ್ದ ಸಗಟು ಹಣದುಬ್ಬರ ಜೂನ್ ನಲ್ಲಿ ಸ್ವಲ್ಪ ಇಳಿಕೆ ಕಂಡಿದೆ.

ಕಚ್ಚಾ ತೈಲ ಮತ್ತು ಆಹಾರ ಪದಾರ್ಥಗಳ ಬೆಲೆಗಳಲ್ಲಿ ಸ್ವಲ್ಪ ಇಳಿಕೆ ಕಂಡಿದ್ದರಿಂದ ಸಗಟು ಬೆಲೆ ಆಧಾರಿತ ಹಣದುಬ್ಬರವು ಜೂನ್‌ನಲ್ಲಿ ಶೇ 12.07 ಕ್ಕೆ ಇಳಿದಿದೆ. ಆದಾಗ್ಯೂ, ಡಬ್ಲ್ಯುಪಿಐ ಹಣದುಬ್ಬರವು ಸತತ ಮೂರನೇ ತಿಂಗಳು ದ್ವಿಗುಣ ಸಂಖ್ಯೆಯಲ್ಲೇ ಉಳಿದಿದೆ.

ಈ ವರ್ಷದ ಜೂನ್ ನಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇಕಡ 12.07ರಷ್ಟಿತ್ತು. ಹಿಂದಿನ ವರ್ಷದ ಮೇ ತಿಂಗಳಿನಲ್ಲಿ ಇದು ಶೇ (–)1.81ರಷ್ಟಾಗಿತ್ತು.

ಜೂನ್ 2021ರಲ್ಲಿ ಹೆಚ್ಚಿನ ಹಣದುಬ್ಬರ ದರವು ಪ್ರಾಥಮಿಕವಾಗಿ ಕಡಿಮೆ ಮೂಲ ಪರಿಣಾಮ ಮತ್ತು ಖನಿಜ ತೈಲಗಳಾದ ಪೆಟ್ರೋಲ್, ಡೀಸೆಲ್ (ಎಚ್‌ಎಸ್‌ಡಿ), ನಾಫ್ತಾ, ಎಟಿಎಫ್, ಕುಲುಮೆ ಎಣ್ಣೆ ಇತ್ಯಾದಿಗಳ ಏರಿಕೆ. ಇನ್ನು ಮೂಲ ಲೋಹ, ಆಹಾರ ಉತ್ಪನ್ನಗಳು, ರಾಸಾಯನಿಕ ಉತ್ಪನ್ನಗಳು ಇತ್ಯಾದಿ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.

ಅಂತೆಯೇ, 'ಇಂಧನ ಮತ್ತು ವಿದ್ಯುತ್ ಹಣದುಬ್ಬರವು ಜೂನ್ ತಿಂಗಳಲ್ಲಿ ಶೇಕಡಾ 32.83ಕ್ಕೆ ಇಳಿಕೆಯಾಗಿದ್ದು, ಮೇನಲ್ಲಿ ಇದು 37.61 ರಷ್ಟಿತ್ತು. ಇನ್ನು ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದರೂ, ಆಹಾರ ಸಾಮಾಗ್ರಿ ವಲಯದಲ್ಲಿನ ಹಣದುಬ್ಬರವು ಜೂನ್ ತಿಂಗಳಲ್ಲಿ ಶೇ 3.09ಕ್ಕೆ ಇಳಿದಿದೆ. ಮೇನಲ್ಲಿ 4.31ರಷ್ಟಿತ್ತು.

ತಯಾರಿಸಿದ ಉತ್ಪನ್ನಗಳಲ್ಲಿ, ಹಣದುಬ್ಬರವು ಜೂನ್ ತಿಂಗಳಲ್ಲಿ ಶೇಕಡಾ 10.88 ರಷ್ಟಿದ್ದು, ಹಿಂದಿನ ತಿಂಗಳಲ್ಲಿ ಈ ಪ್ರಮಾಣ ಶೇಕಡಾ 10.83 ರಷ್ಟಿತ್ತು. ಕಳೆದ ತಿಂಗಳು ಆರ್‌ಬಿಐ ತನ್ನ ವಿತ್ತೀಯ ನೀತಿಯಲ್ಲಿ ಬಡ್ಡಿದರಗಳನ್ನು ದಾಖಲೆಯ ಕನಿಷ್ಠ ಮಟ್ಟದಲ್ಲಿ ಬದಲಿಸಲಿಲ್ಲ ಮತ್ತು ಹಾಲಿ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ವಸತಿ ನೀತಿ ನಿಲುವನ್ನು ಉಳಿಸಿಕೊಳ್ಳಲು ಆರ್ ಬಿಐ ಬದ್ಧವಾಗಿತ್ತು. ಇನ್ನು ಚಿಲ್ಲರೆ ಹಣದುಬ್ಬರವು ಜೂನ್‌ನಲ್ಲಿ ಶೇ 6.26 ರಷ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com