ನವದೆಹಲಿ: ಹೂಡಿಕೆ ಮಾರುಕಟ್ಟೆಯಲ್ಲಿ ಚಿಲ್ಲರೆ(ರೀಟೇಲ್) ಹೂಡಿಕೆದಾರರಲ್ಲಿ ಹೆಚ್ಚಿನ ಮಂದಿ ಮ್ಯೂಚುವಲ್ ಫಂಡ್ ಗಳತ್ತ ಹೆಚ್ಚಿನ ಒಲವು ತೋರುತ್ತಿರುವುದಾಗಿ ನೂತನ ವರದಿ ಬಹಿರಂಗಪಡಿಸಿದೆ.
ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ ಬಿಡುಗಡೆಗೊಳಿಸಿರುವ ವರದಿಯಲ್ಲಿ ಸೆಪ್ಟೆಂಬರ್ ತಿಂಗಳೊಂದರಲ್ಲಿ ಎಸ್ ಐ ಪಿ(Systematic Investment Plan) ಮೂಲಕ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆಯಾಗಿರುವ ಹಣ 10,000 ಕೋಟಿ ರೂ. ದಾಟಿದೆ ಎಂದು ಹೇಳಲಾಗಿದೆ.
ತಿಂಗಳ ಎಸ್ ಐ ಪಿ ಸಂಗ್ರಹ 10,351 ಕೋಟಿ ರೂ. ದಾಖಲಾಗಿದ್ದು, 10,000 ಕೋಟಿ ದಾಟಿದ್ದು ಇದೇ ಮೊದಲು ಎನ್ನಲಾಗಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲೇ 26.80 ಲಕ್ಷ ಮಂದಿ ಎಸ್ ಐ ಪಿ ಹೂಡಿಕೆಗಾಗಿ ಹೆಸರು ನೊಂದಾಯಿಸಿದ್ದಾರೆ ಎನ್ನುವುದು ವಿಶೇಷ.
ಹೆಚ್ಚಿನ ಬ್ಯಾಂಕ್ ಗ್ರಾಹಕರು ಸಾಂಪ್ರದಾಯಿಕ ಹೂಡಿಕೆ ವಿಧಾನಗಳಾದ ಎಫ್ ಡಿ, ಚಿನ್ನ, ರಿಯಲ್ ಎಸ್ಟೇಟ್ ಗಳಿಗಿಂತ ಹೆಚ್ಚಾಗಿ ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡಲು ಬಯಸುತ್ತಿದ್ದಾರೆ ಎನ್ನುವ ಸಂಗತಿಯನ್ನು ವರದಿ ಹೊರಹಾಕಿದೆ.
Advertisement