ಇನ್ಫೋಸಿಸ್, ವಿಪ್ರೊ ಸಂಸ್ಥೆಯ ಇಬ್ಬರು ಉದ್ಯೋಗಿಗಳಿಗೆ ಸ್ಟಾಕ್ ಮಾರ್ಕೆಟ್ ನಿರ್ಬಂಧ ಹೇರಿದ ಸೆಬಿ

2020ರ ಇನ್ಫೋಸಿಸ್ ವ್ಯಾನ್ ಗಾರ್ಡ್ ಒಪ್ಪಂದದ ಸಮಯದಲ್ಲಿ ಆರೋಪಿಗಳು ಅಕ್ರಮ ಎಸಗಿದ್ದರು. ಸೆಬಿ ಆರೋಪಿಗಳಿಂದ 2.69 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (Securities and Exchanges Board of India) ಇನ್ಫೋಸಿಸ್ ಮತ್ತು ವಿಪ್ರೊ ಸಂಸ್ಥೆಯ ಒಬ್ಬ ಉದ್ಯೋಗಿಯನ್ನು ಷೇರು ಮಾರುಕಟ್ಟೆಯಿಂದ ಬಹಿಷ್ಕರಿಸಿದೆ. 

ರಮಿತ್ ಚೌದ್ರಿ ಮತ್ತು ಕೆಯುರ್ ಮನಿಯಾರ್ ಎಂಬುವವರೇ ಸೆಬಿಯಿಂದ ನಿರ್ಬಂಧಕ್ಕೆ ತುತ್ತಾದವರು. ಈ ಇಬ್ಬರೂ ವ್ಯಕ್ತಿಗಳು ಅಕ್ರಮ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಸೆಬಿ ತಿಳಿಸಿದೆ. 

2020ರ ಇನ್ಫೋಸಿಸ್- ವ್ಯಾನ್ ಗಾರ್ಡ್ ಸಂಸ್ಥೆಗಳ ನಡುವಿನ ಒಪ್ಪಂದದ ಸಮಯದಲ್ಲಿ ಆರೋಪಿಗಳು ಅಕ್ರಮ ಎಸಗಿದ್ದರು. ಸೆಬಿ ಆರೋಪಿಗಳಿಂದ 2.69 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ. ಇನ್ಫೋಸಿಸ್ ವ್ಯಾನ್ ಗಾರ್ಡ್ ಒಪ್ಪಂದ ಕಾರ್ಯಕ್ರಮದಲ್ಲಿ ಆರೋಪಿಗಳು ಸಂಸ್ಥೆಯ ಪರವಾಗಿ ನೇರವಾಗಿ ಭಾಗಿಯಾಗಿದ್ದರು.

ಹೀಗಾಗಿ ಆರೋಪಿಗಳಿಗೆ ಒಪ್ಪಂದದ ಅನೇಕ ಗೌಪ್ಯ ಮಾಹಿತಿ ತಿಳಿದಿದ್ದವು. ಅದರ ಆಧಾರದಲ್ಲಿ ಷೇರು ವ್ಯವಹಾರ ನಡೆಸಿರುವುದನ್ನು ಸೆಬಿ ಪತ್ತೆ ಹಚ್ಚಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com