ಕೋವಿಡ್ ಹೊರತಾಗಿಯೂ ದೇಶದ ಪ್ರತಿಷ್ಠಿತ 4 ಐಟಿ ಕಂಪನಿಗಳಿಂದ ಪ್ರಸಕ್ತ ವರ್ಷ 1 ಲಕ್ಷ ಉದ್ಯೋಗಿಗಳ ನೇಮಕ ಸಾಧ್ಯತೆ!

ಕೊರೋನಾವೈರಸ್ ಸಾಂಕ್ರಾಮಿಕದ ನಡುವೆ ದೇಶದ ಪ್ರತಿಷ್ಠಿತ ನಾಲ್ವು ಐಟಿ ಸಂಸ್ಥೆಗಳಾದ ಟಿಸಿಎಸ್, ಇನ್ಫೋಸಿಸ್, ವಿಪ್ರೋ ಮತ್ತು ಹೆಚ್ ಸಿಎಲ್ ಟೆಕ್ ನಂತಹ ಕಂಪನಿಗಳು ಈ ವರ್ಷ 1 ಲಕ್ಷ  ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆಯಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾರಣಾಂತಿಕ ಕೊರೋನಾವೈರಸ್ ಸಾಂಕ್ರಾಮಿಕದ ನಡುವೆ ದೇಶದ ಪ್ರತಿಷ್ಠಿತ ನಾಲ್ವು ಐಟಿ ಸಂಸ್ಥೆಗಳಾದ ಟಿಸಿಎಸ್, ಇನ್ಫೋಸಿಸ್, ವಿಪ್ರೋ ಮತ್ತು ಹೆಚ್ ಸಿಎಲ್ ಟೆಕ್ ನಂತಹ ಕಂಪನಿಗಳು, ಯುರೋಪ್, ಅಮೆರಿಕಾ, ಮತ್ತು ಮಧ್ಯ-ಪೂರ್ವ ರಾಷ್ಟ್ರಗಳಲ್ಲಿ ಮಾರುಕಟ್ಟೆ ತೆರೆಯಲು ಪ್ರಾರಂಭಿಸಿರುವುದರಿಂದ ಈ ವರ್ಷ 1 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆಯಿದೆ. 

ಕ್ಲೌಡ್ ಕಂಪ್ಯೂಟಿಂಗ್, ಡಟಾ ಅನಾಲಿಟಿಕ್ಸ್, ಸೈಬರ್ ಸೆಕ್ಯೂರಿಟಿ, ಮೆಷಿನ್ ಲರ್ನಿಂಗ್ ನಂತಹ ಕ್ಷೇತ್ರಗಳಲ್ಲಿ ಕೌಶಲ್ಯಕ್ಕೆ ಬೇಡಿಕೆ, 2021ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಆಕರ್ಷಕ ವೇತನಕ್ಕೆ ಕಾರಣವಾಗಿದ್ದು, ಉತ್ತಮ ವೇತನ, ಸವಲತ್ತು ಸಿಗುವ ಕಡೆಗೆ ತೆರಳಲು ನೌಕರರು ನಿರ್ಧರಿಸಿದ್ದಾರೆ.

ಕೊರೋನಾವೈರಸ್ ಕಾರಣದಿಂದಾಗಿ ಅನೇಕ ಕಂಪನಿಗಳು ಡಿಸೆಂಬರ್ 2021ರವರೆಗೂ ವರ್ಕ್ ಫ್ರೇಮ್ ಹೋಮ್ ನೀಡಿರುವುದರಿಂದ ಮುಂಬರುವ ತಿಂಗಳುಗಳಲ್ಲಿ ಕ್ಲೈಂಟ್  ಜಿಯೋಗ್ರಾಫಿಸ್ ಐಟಿ ಕಂಪನಿಯಲ್ಲೂ ನೇಮಕ ಹೆಚ್ಚಾಗುವ ಸಾಧ್ಯತೆಯಿರುವುದಾಗಿ ಇಂಡಸ್ಟ್ರೀ ವೀಕ್ಷಕರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಐಟಿ ಕಂಪನಿಗಳ ನಾಲ್ಕನೇ ತ್ರೈಮಾಸಿಕ ವಿಶ್ಲೇಷಣೆ ಪ್ರಕಾರ, 2021ರ ಆರ್ಥಿಕ ವರ್ಷದಲ್ಲಿ ನೌಕರರ ನಿವ್ವಳ ಸೇರ್ಪಡೆ ಕಳೆದ ಆರ್ಥಿಕ ವರ್ಷದಲ್ಲಿದ್ದ 49 ಸಾವಿರದಿಂದ 73 ಸಾವಿರಕ್ಕೆ ಹೆಚ್ಚಾಗಿದೆ. ದೇಶ ಹಾಗೂ ಹೊರದೇಶಗಳಲ್ಲಿ 26 ಸಾವಿರ ನೌಕರರನ್ನು ನೇಮಕ ಮಾಡಿಕೊಳ್ಳುವುದಾಗಿ ಇನ್ಫೋಸಿಸ್ ನ ಚೀಪ್ ಆಪರೇಟಿಂಗ್ ಆಫೀಸರ್ ಯು.ಬಿ. ಪ್ರವೀಣ್ ರಾವ್ ತಿಳಿಸಿದ್ದಾರೆ.

2022ರ ಆರ್ಥಿಕ ವರ್ಷದಲ್ಲಿ 40 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಟಿಸಿಎಸ್ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಂದ್ ತಿಳಿಸಿದ್ದಾರೆ.

ಥಿಯೆರಿ ಡೆಲಾಪೋರ್ಟೆ ವಿಪ್ರೋದ ಸಿಇಒ ಆದ ನಂತರ ಪ್ರಸ್ತಕ ಆರ್ಥಿಕ ವರ್ಷದಲ್ಲಿ  ಹೊಸದಾಗಿ 10 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದಾರೆ.ಈ ವರ್ಷದ 15 ಸಾವಿರ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ನೊಯ್ಡಾ ಮೂಲದ ಹೆಚ್ ಸಿಎಲ್ ಕಂಪನಿ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com