
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿ ಮತ್ತೆ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ದಾಖಲೆ ಮಟ್ಟಕ್ಕೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ.
ಹೌದು ಶುಕ್ರವಾರ ಮತ್ತೆ ದೇಶದಲ್ಲಿ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ 28 ರಿಂದ 29 ಪೈಸೆ ಮತ್ತು ಡೀಸೆಲ್ ದರ 34-35 ಪೈಸೆಯಷ್ಟು ಏರಿಕೆಯಾಗಿದೆ. ಆ ಮೂಲಕ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ದರ 100 ರೂ. ಗಡಿದಾಟಿದೆ. ಸುಮಾರು 18 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಸತತವಾಗಿ ನಾಲ್ಕನೇ ದಿನ ಪರಿಷ್ಕರಿಸಲಾಗಿತ್ತು. ನಂತರ ಎರಡು ದಿನಗಳಿಂದ ದರ ಸ್ಥಿರವಾಗಿತ್ತು. ಈಗ ಸತತವಾಗಿ ಮೂರನೇ ದಿನದಂದು ಮತ್ತೆ ಏರಿಕೆ ಮಾಡಲಾಗಿದೆ.
Price of petrol & diesel in Delhi at Rs 92.34 per litre and Rs 82.95 respectively
— ANI (@ANI) May 14, 2021
Petrol & diesel prices per litre – Rs 100.38 & Rs 91.31 in Bhopal, Rs 98.65 & Rs 90.11 in Mumbai, and Rs 103.27 & Rs 95.70 in Rajasthan's Sri Ganganagar pic.twitter.com/3EyQNprLM1
ಇಂದಿನ ದರ ಏರಿಕೆ ಬಳಿಕ ದೆಹಲಿಯಲ್ಲಿ ಪೆಟ್ರೋಲ್ 92.40 ರೂ. ಮತ್ತು ಡೀಸೆಲ್ 83.01ರೂ. ಗೆ ಏರಿಕೆಯಾಗಿದೆ. ಅಂತೆಯೇ ಕೋಲ್ಕತಾದಲ್ಲಿ ಪೆಟ್ರೋಲ್ 92.49 ರೂ., ಡೀಸೆಲ್ 85.85 ರೂ. ಗೆ ಏರಿಕೆಯಾಗಿದೆ. ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ 98.70ರೂ, ಡೀಸೆಲ್ 90.17 ರೂ. ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 94.15 ರೂ ಮತ್ತು ಡೀಸೆಲ್ 87.86 ರೂ. ಗೆ ಏರಿಕೆಯಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ 95.47 ರೂ. ಡೀಸೆಲ್ 87.99 ರೂ. ಗೆ ಏರಿಕೆಯಾಗಿದೆ. ಅಂತೆಯೇ ಹೈದರಾಬಾದ್ ನಲ್ಲಿ ಪೆಟ್ರೋಲ್ 96.04 ರೂ. ಡೀಸೆಲ್ 90.49 ರೂ. ಗೆ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕೊಂಚ ಏರಿಕೆ ಕಂಡಿದ್ದು, ಪ್ರತಿ ಬ್ಯಾರೆಲ್ ನ ದರ 68.78 ಅಮೆರಿಕ ಡಾಲರ್ ನಷ್ಟಿದೆ.