ಮತ್ತೆ ತೈಲೋತ್ಪನ್ನಗಳ ದರ ಏರಿಕೆ; ಮುಂಬೈನಲ್ಲಿ ದಾಖಲೆಯ 100 ರೂ. ಗಡಿ ದಾಟಿದ ಪೆಟ್ರೋಲ್ ಬೆಲೆ

ದೇಶದಲ್ಲಿ ಮತ್ತೆ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮೊದಲ ಬಾರಿಗೆ ಪೆಟ್ರೋಲ್ ದರ 100 ರೂ ಗಡಿ ದಾಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ದೇಶದಲ್ಲಿ ಮತ್ತೆ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮೊದಲ ಬಾರಿಗೆ ಪೆಟ್ರೋಲ್ ದರ 100 ರೂ ಗಡಿ ದಾಟಿದೆ.

ಶನಿವಾರ ಮತ್ತೆ ದೇಶದಲ್ಲಿ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ 23 ರಿಂದ 27 ಪೈಸೆ ಮತ್ತು ಡೀಸೆಲ್ ದರ 28-30 ಪೈಸೆಯಷ್ಟು ಏರಿಕೆಯಾಗಿದೆ. ಆ ಮೂಲಕ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ದರ 100 ರೂ ಗಡಿದಾಟಿದೆ. ಪ್ರಮುಖವಾಗಿ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ  ಮೊದಲ ಬಾರಿಗೆ ಪೆಟ್ರೋಲ್ ದರ 100 ರೂ ಗಡಿ ದಾಟಿದ್ದು, ಆ ಮೂಲಕ ಪೆಟ್ರೋಲ್ ದರ 100 ಗಡಿ ದಾಟಿದ ದೇಶದ ಎರಡನೇ ರಾಜಧಾನಿ ಎಂಬ ಕುಖ್ಯಾತಿಗೆ ಮುಂಬೈ ಪಾತ್ರವಾಗಿದೆ. ಈ ಹಿಂದೆ ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಪೆಟ್ರೋಲ್ ದರ ಮೊದಲ ಬಾರಿಗೆ 100 ರೂ ಗಡಿ ದಾಟಿತ್ತು. ಪ್ರಸ್ತುತ  ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 27 ಪೈಸೆ ಏರಿಕೆಯೊಂದಿಗೆ 100.25ರೂಗೆ ಏರಿಕೆಯಾಗಿದ್ದು, ಡೀಸೆಲ್ ದರ 30 ಪೈಸೆಗಳ ಏರಿಕೆಯೊಂದಿಗೆ 92.23ರೂ ಗೆ ಏರಿಕೆಯಾಗಿದೆ. 

ಇಂದಿನ ದರ ಏರಿಕೆ ಬಳಿಕ ದೆಹಲಿಯಲ್ಲಿ ಪೆಟ್ರೋಲ್ 94.00ರೂ ಮತ್ತು ಡೀಸೆಲ್ 84.95ರೂ ಗೆ ಏರಿಕೆಯಾಗಿದೆ. ಅಂತೆಯೇ ಕೋಲ್ಕತಾದಲ್ಲಿ ಪೆಟ್ರೋಲ್ 94.03ರೂ, ಡೀಸೆಲ್ 87.79ರೂಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 95.56ರೂ ಮತ್ತು ಡೀಸೆಲ್ 89.70ರೂ ಗೆ ಏರಿಕೆಯಾಗಿದೆ. ಸಿಲಿಕಾನ್ ಸಿಟಿ  ಬೆಂಗಳೂರಿನಲ್ಲಿ ಪೆಟ್ರೋಲ್ 97.13ರೂ- ಡೀಸೆಲ್ 90.05ರೂಗೆ ಏರಿಕೆಯಾಗಿದೆ. ಅಂತೆಯೇ ಹೈದರಾಬಾದ್ ನಲ್ಲಿ ಪೆಟ್ರೋಲ್ 97.70ರೂ ಮತ್ತು ಡೀಸೆಲ್ 92.60ರೂಗೆ ಏರಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com