ಐಟಿ ಪೋರ್ಟಲ್ ನಲ್ಲಿ ಪೂರ್ತಿಯಾಗಿ ಬಗೆಹರಿಯದ ಸಮಸ್ಯೆ: 1200 ಬಳಕೆದಾರರೊಡನೆ ಇನ್ಫೋಸಿಸ್ ಸಂಪರ್ಕ

ಇದುವರೆಗೂ 3 ಕೋಟಿಗೂ ಹೆಚ್ಚು ಮಂದಿ ಭಾರತೀಯರು ಐಟಿ ಪೋರ್ಟಲ್ ಗೆ ಲಾಗಿನ್ ಆಗಿ ಟ್ರಾನ್ಸಾಕ್ಷನ್ ಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಕೆಲವರಿಗೆ ಮಾತ್ರ ಸಮಸ್ಯೆಗಳು ಎದುರಾಗುತ್ತಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಐಟಿ ಕ್ಷೇತ್ರದ ದಿಗ್ಗಜ, ಆದಾಯ ತೆರಿಗೆ ಜಾಲತಾಣದ ನಿರ್ಮಾತೃ ಸಂಸ್ಥೆ ಇನ್ಫೋಸಿಸ್ ಇನ್ನೂ ಕೆಲ ಬಳಕೆದಾರರು ವೆಬ್ ಪೋರ್ಟಲ್ ನಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವುದನ್ನು ಒಪ್ಪಿಕೊಂಡಿದೆ. ಆ ಮೂಲಕ ದೇಶದ ಐಟಿ ಪೋರ್ಟಲ್ ಸಮಸ್ಯೆಗೆ ಇನ್ನೂ ಪೂರ್ತಿಯಾಗಿ ಪರಿಹಾರ ಸಿಕ್ಕಿಲ್ಲ ಎನ್ನುವುದು ದೃಢವಾದಂತಾಗಿದೆ. 

ಜೂನ್ ತಿಂಗಳಲ್ಲಿ ಐಟಿ ಪೋರ್ಟಲ್ ಅನ್ನು ಲೋಕಾರ್ಪಣೆಗೊಳಿಸಲಾಗಿತ್ತು. ಅಂದಿನಿಂದ ಬಳಕೆದಾರರು ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ದೂರು ಸಲ್ಲಿಸುತ್ತಿದ್ದರು. ಇದುವರೆಗೂ 3 ಕೋಟಿಗೂ ಹೆಚ್ಚು ಮಂದಿ ಭಾರತೀಯರು ಐಟಿ ಪೋರ್ಟಲ್ ಗೆ ಲಾಗಿನ್ ಆಗಿ ಟ್ರಾನ್ಸಾಕ್ಷನ್ ಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಕೆಲವರಿಗೆ ಮಾತ್ರ ಸಮಸ್ಯೆಗಳು ಎದುರಾಗುತ್ತಿವೆ.

ಈಗಾಗಲೇ ಇನ್ಫೋಸಿಸ್ ಸಮಸ್ಯೆ ಎದುರಿಸುತ್ತಿರುವ ಸುಮಾರು 1200 ಮಂದಿ ಬಳಕೆದಾರರೊಡನೆ ಸಂಪರ್ಕದಲ್ಲಿದ್ದು ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com